ADVERTISEMENT

ಮುಂದಿನ ಚುನಾವಣೆಯಲ್ಲಿ ನಾನು ಕಾಂಗ್ರೆಸ್ ಅಭ್ಯರ್ಥಿ, ಮಲ್ಲಣ್ಣ BJP ಅಭ್ಯರ್ಥಿ:ಅಶೋಕ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2025, 7:34 IST
Last Updated 19 ಅಕ್ಟೋಬರ್ 2025, 7:34 IST
   

ಬೆಳಗಾವಿ: 'ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಹಣದ ಹೊಳೆ ಹರಿಸುತ್ತಿರುವರಿಗೆ ಪಾಠ ಕಲಿಸಲು ಮಲ್ಲಣ್ಣ ಯಾದವಾಡ ಅವರಿಗೆ ನಾವು ಬೆಂಬಲ ನೀಡಿದ್ದೇವೆ' ಎಂದು ರಾಮದುರ್ಗ ಶಾಸಕ ಅಶೋಕ ಪಟ್ಟಣ ಹೇಳಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ನಡೆಯುತ್ತಿರುವ ಚುನಾವಣೆಯಲ್ಲಿ ಮತದಾನ ಮಾಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, 'ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಾನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ, ಮಲ್ಲಣ್ಣ ಯಾದವಾಡ ಅವರು ಬಿಜೆಪಿ ಪಕ್ಷದ ಅಭ್ಯರ್ಥಿ ಆಗಬಹುದು. ಡಿಸಿಸಿ ಬ್ಯಾಂಕ್ ಚುನಾವಣೆಗೂ ವಿಧಾನ ಸಭಾ ಚುನಾವಣೆಗೂ ಸಂಬಂಧ ಇಲ್ಲ.

ಇದರಲ್ಲಿ ಶತ್ರುಗಳು ಎಂಬುವ ಪ್ರಶ್ನೆ ಬರುವುದಿಲ್ಲ' ಎಂದರು.

ADVERTISEMENT

'ರಾಮದುರ್ಗ ತಾಲ್ಲೂಕಿನ ರೈತ, ಮುಖಂಡರ ಅಪೇಕ್ಷೆಯಂತೆ ಚುನಾವಣಾ ಕಣದಿಂದ ಹಿಂದೆ ಸರಿದಿದ್ದೇನೆ. ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಅವರ ಸಹೋದರ ಮಲ್ಲಣ್ಣ ಯಾದವಾಡ ಅವರಿಗೆ ಬೆಂಬಲ ಸೂಚಿಸಿದ್ದೇವೆ. ನಾವು ಯಾರ ಬಣವೂ ಅಲ್ಲ ನಮ್ಮದು ತಟಸ್ಥ ಬಣ. ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರಿಗೆ ನಾನು ಹೇಳಿದ್ದೆ, ಎಸ್.ಎಸ್. ಢವಣ ಅವರು ನಾಲ್ಕು ಬಾರಿ ನಿರ್ದೇಶಕರು ಆಗಿದ್ದಾರೆ. ಈ ಬಾರಿ ಬೇರೆ ಅಭ್ಯರ್ಥಿ ಹಾಕಿ ಅವಿರೋಧ ಮಾಡೋಣ ಎಂದಿದ್ದೆ.‌ ಆದರೆ ಅದು ಆಗಲಿಲ್ಲ' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.