ADVERTISEMENT

ಸ್ವಾರ್ಥಕ್ಕಾಗಿ ರಾಜ್ಯದ ಹಿತ ಬಲಿ ಕೊಟ್ಟ ಯಡಿಯೂರಪ್ಪ

ರಾಜು ಕಾಗೆ ಆರೋಪ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2019, 15:04 IST
Last Updated 17 ನವೆಂಬರ್ 2019, 15:04 IST
ಉಗಾರದಲ್ಲಿ ಭಾನುವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ರಾಜು ಕಾಗೆ ಮಾತನಾಡಿದರು
ಉಗಾರದಲ್ಲಿ ಭಾನುವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ರಾಜು ಕಾಗೆ ಮಾತನಾಡಿದರು   

ಮೋಳೆ (ಬೆಳಗಾವಿ): ‘ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗುವ ಉದ್ದೇಶದಿಂದ, ಸ್ವಾರ್ಥಕ್ಕಾಗಿ ರಾಜ್ಯದ ಹಿತ ಬಲಿ ಕೊಟ್ಟಿದ್ದಾರೆ’ ಎಂದು ಕಾಗವಾಡ ಕಾಂಗ್ರೆಸ್ ಅಭ್ಯರ್ಥಿ ರಾಜು ಕಾಗೆ ಆರೋಪಿಸಿದರು.

ಉಗಾರದಲ್ಲಿ ಭಾನುವಾರ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

‘ಯಡಿಯೂರಪ್ಪ ಹಾಗೂ 17 ಜನ ಶಾಸಕರುತಮ್ಮ ಸ್ವಾರ್ಥ ರಾಜಕಾರಣಕ್ಕಾಗಿ ಸಮ್ಮಿಶ್ರ ಸರ್ಕಾರವನ್ನೇ ಪತನಗೊಳಿಸಿದ್ದಾರೆ. ಅನರ್ಹ ಶಾಸಕರು ಸುಪ್ರೀ ಕೋರ್ಟ್‌ನಲ್ಲಿ ಗೆಲುವು ಸಾಧಿಸಿರಬಹುದು. ಆದರೆ, ಜನತಾ ನ್ಯಾಯಲಯದಲ್ಲಿ ಅವರು ಅನರ್ಹರೇ’ ಎಂದು ಗುಡುಗಿದರು.

ADVERTISEMENT

‘ಕ್ಷೇತ್ರದ ಮತದಾರರಿಗೆ ಮೋಸ ಮಾಡಿದ ರಾಜಕಾರಣಿ ಯಾವತ್ತೂ ಗೆಲ್ಲಲಾರ. ನಾನು ಜಾತಿ , ದ್ವೇಷದ ರಾಜಕಾರಣವನ್ನು ಎಂದಿಗೂ ಮಾಡಿಲ್ಲ. ಸಭೆಯಲ್ಲಿ ಸೇರಿದ ಕಾಂಗ್ರೆಸ್‌ ಕಾರ್ಯಕರ್ತರನ್ನು ಕಂಡು ನನ್ನ ವಿರೋಧಿಗಳಿಗೆ ನಡುಕ ಹುಟ್ಟಿದೆ. 20 ವರ್ಷಗಳಲ್ಲಿ 4 ಬಾರಿ ಶಾಸಕನಾಗಿ ಜನಪರ ಕಾರ್ಯಗಳನ್ನು ಮಾಡಿದ್ದೇನೆ. ಅವೇ ನನಗೆ ಶ್ರೀರಕ್ಷೆಯಾಗಲಿವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಮುಖಂಡ ಮೋಹನರಾವ್ ಶಹಾ ಮಾತನಾಡಿ, ‘ರಾಜ್ಯದಲ್ಲಿ ಪ್ರವಾಹ ಬಂದು4 ತಿಂಗಳು ಸಮೀಪಿಸುತ್ತಿದೆ. ಆದರೆ, ಸರ್ಕಾರ ಸಂತ್ರಸ್ತರಿಗೆ ನೆರವಾಗಿಲ್ಲ. ಇದೇ ಈ ಸರ್ಕಾರದ ಸಾಧನೆಯಾಗಿದೆ’ ಎಂದು ಟೀಕಿಸಿದರು.

ಪಕ್ಷದ ಬ್ಲಾಕ್ ಅಧ್ಯಕ್ಷ ವಿಜಯಕುಮಾರ ಅಕಿವಾಟೆ,ಪಟ್ಟಣ ಪಂಚಾಯ್ತಿ ಉಪಾಧ್ಯಕ್ಷ ರವೀಂದ್ರ ಗಾಣಿಗೇರ, ಕೆಪಿಸಿಸಿ ಸದಸ್ಯರ ಚಂದ್ರಕಾಂತ ಇಮ್ಮಡಿ, ಮುಖಂಡರಾದ ಸುರೇಶ ಥೋರುಸೆ, ಸಂಜಯ ತಳವಲಕರ, ದೋಂಡಿರಾಮ ಸುತಾರ,ಶಿದಗೌಡ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.