ADVERTISEMENT

ಖೋಟಾ ನೋಟು ಜಾಲ ಪತ್ತೆ: ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2019, 14:24 IST
Last Updated 14 ನವೆಂಬರ್ 2019, 14:24 IST
ಕುಡಚಿಯಲ್ಲಿ ಖೋಟಾ ನೋಟು ಚಲಾವಣೆ  ಆರೋಪದ ಮೇಲೆ ಇಬ್ಬರು ಆರೋಪಿಗಳನ್ನು ಡಿಸಿಐಬಿ ಪೊಲೀಸರು ಗುರುವಾರ ಬಂಧಿಸಿದ್ದಾರೆ
ಕುಡಚಿಯಲ್ಲಿ ಖೋಟಾ ನೋಟು ಚಲಾವಣೆ  ಆರೋಪದ ಮೇಲೆ ಇಬ್ಬರು ಆರೋಪಿಗಳನ್ನು ಡಿಸಿಐಬಿ ಪೊಲೀಸರು ಗುರುವಾರ ಬಂಧಿಸಿದ್ದಾರೆ   

ಬೆಳಗಾವಿ: ಜಿಲ್ಲಾ ಅಪರಾಧ ಪತ್ತೆ ದಳದ (ಡಿಸಿಐಬಿ) ಪೊಲೀಸರು ಗುರುವಾರ ಕಾರ್ಯಾಚರಣೆ ನಡೆಸಿ ನಕಲಿ ನೋಟು ಜಾಲ ಪತ್ತೆ ಹಚ್ಚಿ, ಇಬ್ಬರನ್ನು ಬಂಧಿಸಿದ್ದಾರೆ. ಅವರಿಂದ ವಿವಿಧ ಮುಖಬೆಲೆಯ ₹ 2.33 ಲಕ್ಷ ಮೌಲ್ಯದ ನೋಟುಗಳು, ದ್ವಿಚಕ್ರವಾಹನ ಹಾಗೂ 2 ಮೊಬೈಲ್‌ ಫೋನ್‌ಗಳನ್ನು ವಶಕ್ಕೆ ಪಡೆದಿದ್ದಾರೆ.

ಪರಶುರಾಮ ಕುಶಪ್ಪ ನಾಯಿಕ ಅಲಿಯಾಸ್ ಗಸ್ತಿ ಹಾಗೂ ಜಲಾಲ ಅಲಾವುದ್ದೀನ್ ದರೂರವಾಲೆ ಬಂಧಿತರು. ಅವರು ಕುಡಚಿಯಿಂದ ಹಾರೊಗೇರಿ ಕಡೆಗೆ ದ್ವಿಚಕ್ರವಾಹನದಲ್ಲಿ ಸಾಗಿಸುವಾಗ ಅವರನ್ನು ಪೊಲೀಸರು ಬಂಧಿಸಿದ್ದಾರೆ.

‘ಅವರ ಬಳಿ ₹ 500 ಮುಖಬೆಲೆಯ 155, ₹ 100 ಮುಖಬೆಲೆಯ 210, ₹ 500 ಮುಖಬೆಲೆಯ 237 (ಏಕಮುಖ) ಮತ್ತು ₹ 200 ಮುಖಬೆಲೆಯ 80 ಕೋಟಾ ನೋಟುಗಳಿದ್ದವು. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಪ್ರಮುಖ ಆರೋಪಿಯ ಕುಡಚಿಯ ಫಾರೂಕ್‌ ರಫೀಕ್‌ ಫೀರಜಾದೆ ಪರಾರಿಯಾಗಿದ್ದಾನೆ. ಕುಡಚಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ’ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

ADVERTISEMENT

ಡಿಸಿಐಬಿ ಇನ್‌ಸ್ಪೆಕ್ಟರ್‌ ನಿಂಗನಗೌಡ ಎ. ‍ಪಾಟೀಲ, ಪಿಎಸ್‌ಐ ಆರ್‌.ವಿ. ಪಟ್ಟಣಶೆಟ್ಟಿ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.