ಪ್ರಜಾವಾಣಿ ವಾರ್ತೆ
ಬೆಳಗಾವಿ: ಇಲ್ಲಿನ ಟಿಳಕವಾಡಿಯ ಗೋಡ್ಸೆವಾಡಿಯಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಐವರು ಆರೋಪಿಗಳನ್ನು ಟಿಳಕವಾಡಿ ಠಾಣೆ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಅಯೋಧ್ಯಾ ನಗರದ ವಿನಾಯಕ ಕೊಲ್ಲಾಪುರ(29), ಸಂದೇಶ ಗವಾಲಿ(24), ಭವಾನಿ ನಗರದ ಕುಮಾರ ಪೂಜಾರಿ(39), ರೋಹಿತ ಮುಳವೆ(30), ಸೌರಭ ಸತುಸ್ಕರ್(22) ಬಂಧಿತರು.
ಅವರಿಂದ ₹14 ಸಾವಿರ ಮೌಲ್ಯದ 494 ಗ್ರಾಂ ಮಾದಕವಸ್ತು, ಕೃತ್ಯಕ್ಕೆ ಬಳಸಿದ ₹2 ಲಕ್ಷ ಮೌಲ್ಯದ ಕಾರು, ನಾಲ್ಕು ಮೊಬೈಲ್, ₹2,500 ನಗದು ವಶಕ್ಕೆ ಪಡೆಯಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.