ADVERTISEMENT

ಡೇಟಾ ಎಂಟ್ರಿ ಆಪರೇಟರ್‌ ಲೋಕಾಯುಕ್ತ ಬಲೆಗೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2024, 16:22 IST
Last Updated 8 ಫೆಬ್ರುವರಿ 2024, 16:22 IST
   

ಬೆಳಗಾವಿ: ಜಿಲ್ಲಾ ನೋಂದಣಿ ಕಚೇರಿಯ ಡೇಟಾ ಆಪರೇಟರ್‌ ಸೋಮಶೇಖರ ಮಾಸ್ತಮರಡಿ ₹22 ಸಾವಿರ ಲಂಚ ಪಡೆಯುವಾಗ, ಗುರುವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

‘ತಾಲ್ಲೂಕಿನ ಕಂಗ್ರಾಳಿ ಬಿ.ಕೆ ಗ್ರಾಮದಲ್ಲಿ ನಾನು ಖರೀದಿಸಿದ ಜಾಗಕ್ಕೆ ಸಂಬಂಧಿಸಿ ಕೊರತೆ ಮುದ್ರಾಂಕ ದೃಢೀಕರಣ ಮಾಡಿಕೊಡಲು ಸೋಮಶೇಖರ ₹22 ಸಾವಿರ ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ’ ಎಂದು ಬೆಳಗಾವಿಯ ಅವಿನಾಶ ಧಾಮಣಕರ ಲೋಕಾಯುಕ್ತ ಠಾಣೆಗೆ ದೂರು ನೀಡಿದ್ದರು.

‘ಅವನಾಶ ಅವರಿಂದ ಗುರುವಾರ ಹಣ ಪಡೆಯುವಾಗ ಸಿಕ್ಕಿಬಿದ್ದ ಸೋಮಶೇಖರ ಅವರನ್ನು ಬಂಧಿಸಲಾಗಿದೆ’ ಎಂದು ಲೋಕಾಯುಕ್ತ ಎಸ್ಪಿ ಹನುಮಂತರಾಯ ತಿಳಿಸಿದ್ದಾರೆ. ಇನ್‌ಸ್ಪೆಕ್ಟರ್‌ ಯು.ಎಸ್‌.ಅವಟಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.