ADVERTISEMENT

ಬೈಲಹೊಂಗಲ: ಹೊಸೂರಿನಲ್ಲಿ ಕೃಷಿ ಭೂಮಿಗೆ ನುಗ್ಗಿದ್ದ ಮೊಸಳೆ ಸೆರೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2022, 10:29 IST
Last Updated 16 ಅಕ್ಟೋಬರ್ 2022, 10:29 IST
ಹೊಸೂರ ಗ್ರಾಮದ ಕೃಷಿ ಭೂಮಿಗೆ ನುಗ್ಗಿದ್ದ ಮೊಸಳೆಯನ್ನು ಸೆರೆ ಹಿಡಿದ ಗ್ರಾಮಸ್ಥರು.
ಹೊಸೂರ ಗ್ರಾಮದ ಕೃಷಿ ಭೂಮಿಗೆ ನುಗ್ಗಿದ್ದ ಮೊಸಳೆಯನ್ನು ಸೆರೆ ಹಿಡಿದ ಗ್ರಾಮಸ್ಥರು.   

ಬೈಲಹೊಂಗಲ(ಬೆಳಗಾವಿ ಜಿಲ್ಲೆ): ಸಮೀಪದ ಹೊಸೂರ ಗ್ರಾಮದ ರೈತ ದೇವೇಂದ್ರಪ್ಪ ಜಾಧವ ಅವರ ಜಮೀನಿನಲ್ಲಿ ಪ್ರತ್ಯಕ್ಷವಾದಮೊಸಳೆಯನ್ನು ಗ್ರಾಮಸ್ಥರು ಭಾನುವಾರ ಸೆರೆಹಿಡಿದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಿದರು.

ಕಳೆದ ಒಂದು ವಾರದಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಮಲಪ್ರಭಾ ನದಿಯಲ್ಲಿ ತೇಲಿ ಬಂದ ಮೊಸಳೆ ಕೃಷಿ ಭೂಮಿಗೆ ನುಗ್ಗಿತ್ತು.ಇದನ್ನು ಕಂಡ ರೈತರು ಕೆಲಕಾಲ ಗಾಬರಿಯಾದರು‌. ಈ ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ ಮೊಸಳೆ ಸೆರೆಹಿಡಿದರು.

ಮೊಸಳೆ ಸೆರೆಯಾದ ದೃಶ್ಯಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.