ADVERTISEMENT

ಸಂತ್ರಸ್ತರಿಗೆ ಸಿಎಸ್‌ಸಿ ನೆರವು

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2019, 13:31 IST
Last Updated 18 ಆಗಸ್ಟ್ 2019, 13:31 IST
ಸವದತ್ತಿ ತಾಲ್ಲೂಕಿನ ನೆರೆ ಸಂತ್ರಸ್ತರಿಗೆ ಸಾಮಾನ್ಯ ಸೇವಾ ಕೇಂದ್ರದಿಂದ ಅಗತ್ಯ ಸಾಮಗ್ರಿಗಳನ್ನು ದಿಗ್ವಿಜಯ ಸಿದ್ನಾಳ ಮೊದಲಾದವರು ವಿತರಿಸಿದರು
ಸವದತ್ತಿ ತಾಲ್ಲೂಕಿನ ನೆರೆ ಸಂತ್ರಸ್ತರಿಗೆ ಸಾಮಾನ್ಯ ಸೇವಾ ಕೇಂದ್ರದಿಂದ ಅಗತ್ಯ ಸಾಮಗ್ರಿಗಳನ್ನು ದಿಗ್ವಿಜಯ ಸಿದ್ನಾಳ ಮೊದಲಾದವರು ವಿತರಿಸಿದರು   

ಬೆಳಗಾವಿ: ಸವದತ್ತಿ ತಾಲ್ಲೂಕು ಸುತ್ತಮುತ್ತಲಿನ ಹಳ್ಳಿಗಳ ನೆರೆ ಸಂತ್ರಸ್ತರಿಗೆ ಸಿಎಸ್‌ಸಿ (ಸಾಮಾನ್ಯ ಸೇವಾ ಕೇಂದ್ರ) ವತಿಯಿಂದ ಹೊದಿಕೆ, ಕುಡಿಯುವ ನೀರಿನ ಬಾಟಲಿಗಳು, ಪಾತ್ರೆ, ಬಿಸ್ಕೆಟ್, ಔಷಧ, ದವಸ-ಧಾನ್ಯ ಒಳಗೊಂಡ ಕಿಟ್‌ಗಳನ್ನು ಈಚೆಗೆ ವಿತರಿಸಲಾಯಿತು.

ಸಿ.ಎಸ್.ಸಿ ಇ-ಆಡಳಿತ ರಾಜ್ಯ ಮುಖ್ಯಸ್ಥ ರಾಬರ್ಟ್ ಡಿ ನೆಲ್ಸನ್, ಬೆಂಗಳೂರು ಗ್ರಾಮಾಂತರ ಜಿಲ್ಲಾ ಮುಖ್ಯಸ್ಥ ಮಹೇಶ ವಿ.ಎಸ್, ಕರ್ನಾಟಕ ಆಧಾರ್ ಆಪರೇಟರ್ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಯೋಗ ಸಾಯಿ ಪ್ರಕಾಶ್, ಬೆಂಗಳೂರು ನಗರ ಸಿ.ಎಸ್.ಸಿ ವಿ.ಎಲ್.ಇ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಜಗದೀಶ್, ವಿ.ಎಲ್.ಇ.ಗಳಾದ ಸುನೀಲ್ ರಾಜ್‌ ಮತ್ತು ಸ್ವಾಮಿ ಇದ್ದರು.

ಶಶಿ ಸಿದ್ನಾಳ ಪ್ರತಿಷ್ಠಾನದ ಕಾರ್ಯದರ್ಶಿ ದಿಗ್ವಿಜಯ ಸಿದ್ನಾಳ್ ಕಿಟ್‌ಗಳನ್ನು ವಿತರಿಸಲು ಸಹಕರಿಸಿದರು ಹಾಗೂ ಸವದತ್ತಿ ತಾಲ್ಲೂಕಿನ ಮುನವಳ್ಳಿ, ಜೋರಾಪುರ, ತೆಗ್ಯಾಲ, ಜಕಬಾಳ, ಅತಗಲ್ಲ, ಬಸರಗಿ ಗ್ರಾಮಗಳಿಗೆ ಭೇಟಿ ನೀಡಿ ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಿದರು. ಆತ್ಮಸ್ಥೈರ್ಯ ತುಂಬಿದರು. ಕೇಂದ್ರ ಸರ್ಕಾರ ಸಂತ್ರಸ್ತರ ಸಹಾಯಕ್ಕೆ ನಿಲ್ಲಲಿದೆ. ಮುಖ್ಯಮಂತ್ರಿ ಜೊತೆ ಚರ್ಚಿಸಿ ಗ್ರಾಮ ಪಂಚಾಯ್ತಿ ಮೂಲಕ ಮನೆಗಳನ್ನು ನಿರ್ಮಿಸಿಕೊಡಲು ಸಹಾಯ ಮಾಡುವುದಾಗಿ ಭರವಸೆ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.