ADVERTISEMENT

ಮಹಿಳಾ ಸಬಲೀಕರಣ ಜಾಗೃತಿ; ಸೈಕಲ್‌ ಯಾತ್ರೆ ಇಂದಿನಿಂದ

ಬೆಳಗಾವಿಯಿಂದ– ಬೆಂಗಳೂರಿಗೆ;

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2018, 13:04 IST
Last Updated 4 ಡಿಸೆಂಬರ್ 2018, 13:04 IST

ಬೆಳಗಾವಿ: ಮಹಿಳಾ ಸಬಲೀಕರಣ ಕುರಿತು ಜಾಗೃತಿ ಮೂಡಿಸಲು ಬೆಳಗಾವಿಯಿಂದ ಬೆಂಗಳೂರುವರೆಗೆ ಮಹಿಳಾ ಸೈಕಲ್‌ ಯಾತ್ರೆಯನ್ನು ಇದೇ 5ರಿಂದ 9ರವರೆಗೆ ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ರಾಜ್ಯ ಮೀಸಲು ಪೊಲೀಸ್‌ ಪಡೆ ಹಾಗೂ ಉಮೀದ್‌ 1000 ಸೈಕ್ಲೊಥಾನ್‌ ಸಂಸ್ಥೆಗಳ ಜಂಟಿ ಸಹಯೋಗದಲ್ಲಿ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಕೆಎಸ್‌ಆರ್‌ಪಿ ಎಡಿಜಿಪಿ ಭಾಸ್ಕರ್‌ ರಾವ್‌ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 5ರಂದು ಬೆಳಿಗ್ಗೆ 6.30ಕ್ಕೆ ಇಲ್ಲಿನ ರಾಣಿ ಚನ್ನಮ್ಮ ವೃತ್ತದಲ್ಲಿರುವ ಗಣೇಶ ಮಂದಿರದಿಂದ ಯಾತ್ರೆ ಆರಂಭವಾಗಲಿದೆ. ಪ್ರಾದೇಶಿಕ ಆಯುಕ್ತ ಪಿ.ಎ. ಮೇಘಣ್ಣವರ ಚಾಲನೆ ನೀಡಲಿದ್ದಾರೆ ಎಂದರು.

ಯಾತ್ರೆಯಲ್ಲಿ ಐಎಎಸ್‌ ಅಧಿಕಾರಿಗಳಾದ ಚಾರುಲತಾ ಸೋಮಲ್‌, ಫೌಜಿಯಾ ತರನಂ, ಕೆ.ಆರ್‌.ನಂದಿನಿ ಹಾಗೂ ಶಿಲ್ಪಾ ಶರ್ಮಾ ಪಾಲ್ಗೊಳ್ಳಲಿದ್ದಾರೆ. ಐಪಿಎಸ್‌ ಅಧಿಕಾರಿಗಳಾದ ನಿಶಾ ಜೇಮ್ಸ್‌, ಶ್ರುತಿ, ಸವಿತಾ ಹೂಗಾರ ಸೇರಿದಂತೆ 45 ಮಹಿಳಾ ಪೊಲೀಸ್‌ ಅಧಿಕಾರಿಗಳು ಹಾಗೂ ಇತರ ಸಂಸ್ಥೆಗಳ 40 ಜನ ಮಹಿಳೆಯರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ADVERTISEMENT

ಸುಮಾರು 540 ಕಿ.ಮೀ ಉದ್ದದ ದೂರವನ್ನು 5 ದಿನಗಳಲ್ಲಿ ಸೈಕ್ಲಿಸ್ಟ್‌ಗಳು ಕ್ರಮಿಸಲಿದ್ದಾರೆ. ಪ್ರತಿದಿನ ಸರಾಸರಿಯಾಗಿ 110 ಕಿ.ಮೀ ಸೈಕಲ್‌ ತುಳಿಯಲಿದ್ದಾರೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.