ಹುಕ್ಕೇರಿ: ‘ತಾಲ್ಲೂಕಿನ ಶಿರಢಾಣ ಗ್ರಾಮದ ಬಳಿಯ ಘಟಪ್ರಭಾ ನದಿ ಪಾತ್ರದ ಜನರಿಗೆ ಸರ್ಕಾರಿ ಗೈರಾಣ ಜಮೀನು ನೀಡಬೇಕು’ ಎಂದು ದಲಿತ ಮುಖಂಡ ಶ್ರೀಕಾಂತ ತಳವಾರ ತಹಶೀಲ್ದಾರರಿಗೆ ಆಗ್ರಹಿಸಿದರು.
ಸೋಮವಾರ ತಹಶೀಲ್ದಾರ್ ಕಚೇರಿ ಎದುರು ಶಿರಡಾಣ ಗ್ರಾಮಸ್ಥರು ಮತ್ತು ಸಂತ್ರಸ್ತರು ಪ್ರತಿಭಟನೆ ನಡೆಸಿ ಮಾತನಾಡಿದರು.
ತಾಲ್ಲೂಕಿನ ಶಿರಡಾಣ ಗ್ರಾಮದ ಹತ್ತಿರ ಘಟಪ್ರಭಾ ಹಿನ್ನಿರಿನಿಂದ ಮುಳುಗಡೆ ಹೊಂದುತ್ತಿರುವ ಜನರಿಗೆ ಸರ್ಕಾರಿ ಗೈರಾಣು ಜಮೀನು ನೀಡಬೇಕು. ಘಟಪ್ರಭಾ ಮತ್ತು ಹಿರಣ್ಯಕೇಶಿ ನದಿಗಳ ನೀರು ಪ್ರತಿ ವರ್ಷ ಮನೆಗಳಿಗೆ ನುಗ್ಗಿ ಹಾನಿ ಅನುಭವಿಸುತ್ತಿದ್ದೇವೆ. ಗ್ರಾಮದ ಬ್ಲಾಕ್ ನಂಬರ್ 29ನೇ ಜಾಗದ 10 ಎಕರೆ ಜಮೀನಿನಲ್ಲಿ ವಾಸಿಸಲು ಹಕ್ಕು ಪತ್ರ ನೀಡಬೇಕು’ ಎಂದು ಒತ್ತಾಯಿಸಿದರು.
‘ಈಗಾಗಲೇ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಲಾಗಿದ್ದು, ಇವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಸರ್ಕಾರ ಸ್ಪಂದಿಸದಿದ್ದರೆ, ಮುಂಬರುವ ದಿನದಲ್ಲಿ ತಹಶೀಲ್ದಾರ್ ಕಚೇರಿ ಎದುರು ಪೆಂಡಾಲ್ ಹಾಕಿ ಸತ್ಯಾಗ್ರಹ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದರು.
ಪ್ರತಿಭಟನಾಕಾರರು ಸಲ್ಲಿಸಿದ ಮನವಿಯನ್ನು ಗ್ರೇಡ್ 2 ತಹಶೀಲ್ದಾರ್ ಪ್ರಕಾಶ ಕಲ್ಲೋಳಿ ಸ್ವೀಕರಿಸಿದರು.
ದಲಿತ ಸಂಘರ್ಷ ಸಮಿತಿ ಉತ್ತರ ಕರ್ನಾಟಕ ಸಂಚಾಲಕ ಕಿರಣ ಶಿವಾಳೆ, ಅಶೋಕ ವಾಡೆದಾರ, ದುರ್ಗಪ್ಪಾ ಪೂಜೇರಿ, ಮಲಗೌಡ ಪಾಟೀಲ, ಬಸವಣ್ಣಿ ವಾರೆಪ್ಪಗೋಳ, ಮುತ್ತುರಾಜ ಮ್ಯಾಗೇರಿ, ಶಂಕರ ವಾಡೆರಿ, ಮಹಾಂತೇಶ ವಗ್ಗಣ್ಣವರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.