ADVERTISEMENT

ಬಿಜೆಪಿಗೆ ಬರುತ್ತೀಯಲ್ಲ: ಕಾಂಗ್ರೆಸ್ ಮುಖಂಡ ವಿನಯಗೆ ರಮೇಶ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2020, 12:01 IST
Last Updated 28 ಅಕ್ಟೋಬರ್ 2020, 12:01 IST

ಬೆಳಗಾವಿ: ಇಲ್ಲಿನ ಸುವರ್ಣ ವಿಧಾನಸೌಧದ ಎದುರು ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಪ್ರವರ್ಗ 2ಎ ಮೀಸಲಾತಿಗೆ ಆಗ್ರಹಿಸಿ ಬುಧವಾರ ಆಯೋಜಿಸಿದ್ದ ಉಪವಾಸ ಸತ್ಯಾಗ್ರಹದ ವೇದಿಕೆಯಲ್ಲಿ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರು ಕಾಂಗ್ರೆಸ್ ಮುಖಂಡ ವಿನಯ ಕುಲಕರ್ಣಿ ಅವರಿಗೆ ಬಿಜೆಪಿಗೆ ಬರುತ್ತೀಯಲ್ಲ?’ ಎಂದು ಕೇಳಿದ ಪ್ರಸಂಗ ನಡೆಯಿತು. ವಿನಯ ಏನನ್ನೂ ಪ್ರತಿಕ್ರಿಯಿಸಿದೆ ಕೈ ಮುಗಿದು ಕುಳಿತರು.

‍ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹಾಗೂ ವಿನಯ ಕುಲಕರ್ಣಿ ಸಚಿವರಿಗೆ ಮನವಿ ಪತ್ರ ಸಲ್ಲಿಸಿದರು. ಆಗ, ‘ಇದೊಂದು ಕೆಲಸ ಮಾಡಿ ಕೊಡಿ’ ಎಂದು ಕೋರಿದ ವಿನಯಗೆ, ಬಿಜೆಪಿಗೆ ಬರುತ್ತೀಯಲ್ಲಾ ಎಂದು ಸಚಿವರು ಹೇಳಿದರು. ಇದನ್ನು ಗಮನಿಸಿದ ಸ್ವಾಮೀಜಿ ನಸುನಕ್ಕು ಸುಮ್ಮನಾದರು.

ಬಳಿಕ ಪತ್ರಕರ್ತರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ವಿನಯ, ‘ಬಿಜೆಪಿಗೆ ಬರುವಂತೆ ಜಲಸಂಪನ್ಮೂಲ ಸಚಿವರು ಕರೆದರು. ಆದರೆ, ನಾನು ಅವರಿಗೆ ಕೈಮುಗಿದೆನಷ್ಟೆ’ ಎಂದು ತಿಳಿಸಿದರು.

ADVERTISEMENT

‘ಬಿಜೆಪಿಗೆ ಸೇರುವ ಬಗ್ಗೆ ಎಲ್ಲಿಯೂ ಚರ್ಚಿಸಿಲ್ಲ. ಆ ಯೋಚನೆಯೂ ಇಲ್ಲ. ಹೊಲದಲ್ಲಿ ಕೃಷಿ ಮಾಡಿಕೊಂಡು ನನ್ನ ಪಾಡಿಗೆ ನಾನಿದ್ದೇನೆ. ಬಿಜೆಪಿ ಸೇರ್ಪಡೆ ಬಗ್ಗೆ ಯಾರೊಂದಿಗೂ ಚರ್ಚಿಸಿಲ್ಲ; ಅಭಿಮಾನಿಗಳು ಚರ್ಚಿಸಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.