ADVERTISEMENT

ಬೆಳಗಾವಿಯ ವಿದೇಶ ವ್ಯಾಪಾರ ಕಚೇರಿ ಬಂದ್‌ ಮಾಡಿದ ಕೇಂದ್ರ ಸರ್ಕಾರ

​ಪ್ರಜಾವಾಣಿ ವಾರ್ತೆ
Published 2 ಜನವರಿ 2020, 13:47 IST
Last Updated 2 ಜನವರಿ 2020, 13:47 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಳಗಾವಿ: ಉತ್ತರ ಕರ್ನಾಟಕದ ರಫ್ತುದಾರರಿಗೆ ನೆರವು ನೀಡುವ ಉದ್ದೇಶದಿಂದ ನಗರದಲ್ಲಿ ಸ್ಥಾಪಿಸಿದ್ದ ವಿದೇಶ ವ್ಯಾಪಾರ ಮಹಾ ನಿರ್ದೇಶಕರ (ಡಿಜಿಎಫ್‌ಟಿ) ಪ್ರಾದೇಶಿಕ ಕಚೇರಿಯನ್ನು ಕೇಂದ್ರ ಸರ್ಕಾರ ಮುಚ್ಚಿದೆ.

ಇಲ್ಲಿನ ಆಟೊ ನಗರದಲ್ಲಿ 2017ರ ಏಪ್ರಿಲ್‌ನಲ್ಲಿ ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್‌ ಕಚೇರಿ ಸ್ಥಾಪಿಸಿದ್ದರು. ಸ್ಥಳೀಯ ಉದ್ಯಮಿಗಳಿಂದ ನಿರೀಕ್ಷೆಗೆ ತಕ್ಕಂತೆ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಎರಡು ತಿಂಗಳ ಹಿಂದೆ ಕಚೇರಿಯ ಬಾಗಿಲು ಮುಚ್ಚಲಾಗಿದೆ.

‘ರಫ್ತಿಗೆ ಸಂಬಂಧಿಸಿದಂತೆ ಉದ್ಯಮಿಗಳು ಆನ್‌ಲೈನ್‌ನಲ್ಲಿಯೇ ತಮ್ಮ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತಾರೆ. ಕಚೇರಿಗೆ ಅಲೆಯುವುದಕ್ಕಿಂತ ಆನ್‌ಲೈನ್‌ನಲ್ಲಿ ಮಾಡುವುದು ಅವರಿಗೆ ಸುಲಭ. ಹೀಗಾಗಿ ಈ ಕೇಂದ್ರದಿಂದ ಉದ್ಯಮಿಗಳು ಹೆಚ್ಚಿನ ನೆರವು ಪಡೆಯಲಿಲ್ಲ. ಅದಕ್ಕಾಗಿ ಬಂದ್‌ ಮಾಡಲಾಗಿದೆ’ ಎಂದು ವಾಣಿಜ್ಯೋದ್ಯಮ ಸಂಘದ ಬೆಳಗಾವಿ ಘಟಕದ ಅಧ್ಯಕ್ಷ ಶ್ರೀಧರ ಉಪ್ಪಿನ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.