ADVERTISEMENT

‘ನಾಟಕಗಳಿಗೆ ಜೀವ ತುಂಬುವ ಕಾರ್ಯವಾಗಲಿ’

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2019, 15:17 IST
Last Updated 19 ನವೆಂಬರ್ 2019, 15:17 IST
ಬೆಳಗಾವಿಯಲ್ಲಿ ಮಂಗಳವಾರ ನಡೆದ ನಾಟಕೋತ್ಸವವನ್ನು ಗೋವಾದ ‘ಥಿಯೇಟರ್ ಬಿಲಾಂಗಿಂಗ್’ ತಂಡದ ನಿರ್ಮಾಪಕಿ ಒಶೋ ಜ್ಯೊ ಹಾಗೂ ಗಣ್ಯರು ಉದ್ಘಾಟಿಸಿದರು
ಬೆಳಗಾವಿಯಲ್ಲಿ ಮಂಗಳವಾರ ನಡೆದ ನಾಟಕೋತ್ಸವವನ್ನು ಗೋವಾದ ‘ಥಿಯೇಟರ್ ಬಿಲಾಂಗಿಂಗ್’ ತಂಡದ ನಿರ್ಮಾಪಕಿ ಒಶೋ ಜ್ಯೊ ಹಾಗೂ ಗಣ್ಯರು ಉದ್ಘಾಟಿಸಿದರು   

ಬೆಳಗಾವಿ: ‘ಕಲೆ, ಸಾಹಿತ್ಯ, ನಾಟಕಗಳಿಂದ ಲಕ್ಷಾಂತರ ಕಲಾವಿದರೂ ಬದುಕು ರೂಪಿಸಿಕೊಂಡಿದ್ದಾರೆ. ಹೀಗಾಗಿ, ಇವುಗಳನ್ನು ಪ್ರೋತ್ಸಾಹಿಸಿ ಬೆಳೆಸುವ ಕರ್ತವ್ಯ ನಮ್ಮದಾಗಿದೆ’ ಎಂದು ಗೋವಾದ ‘ಥಿಯೇಟರ್ ಬಿಲಾಂಗಿಂಗ್’ ತಂಡದ ನಿರ್ಮಾಪಕಿ ಒಶೋ ಜ್ಯೊ ಹೇಳಿದರು.

ಇಲ್ಲಿನ ಸದಾಶಿವನಗರದ ಚಿಂದೊಡಿಲೀಲಾ ರಂಗಮಂದಿರಲ್ಲಿ ಮಂಗಳವಾರ ಯುನೈಟೆಡ್ ಸಮಾಜ ಕ್ಷೇಮಾಭಿವೃದ್ಧಿ ಸಂಸ್ಥೆ, ರೋಟರಿ ಕ್ಲಬ್ ಮಿಡ್ ಟೌನ್, ಕೆ.ಎಲ್.ಇ ಸಂಸ್ಥೆಯ ಪ್ರಭಾಕರ ಕೋರೆ ಆಸ್ಪತ್ರೆ, ಕೀರ್ತಿ ಸರ್ಜಿಕಲ್ ಹಾಗೂ ವಿನುತಾ ಶ್ರೇಯ ಪ್ರಕಾಶನ ಸಹಯೋಗದಲ್ಲಿ ಆಯೋಜಿಸಿದ್ದ ನಾಟಕೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ತಂತ್ರಜ್ಞಾನದಲ್ಲಿ ಸಿಲುಕಿ ನಾಟಕ ಮೊದಲಾದ ಕಲೆಗಳು ನಶಿಸುತ್ತಿವೆ. ಅವುಗಳಿಗೆ ಜೀವ ತುಂಬುವ ಕಾರ್ಯ ನಡೆಯಬೇಕಾಗಿದೆ’ ಎಂದರು.

ADVERTISEMENT

ನಾಟಕಕಾರ ಡಿ.ಎಸ್. ಚೌಗಲೆ, ಬಾಸೂರು ತಿಪ್ಪೇಸ್ವಾಮಿ, ಅಶೋಕ ಮಳಗಲಿ ಮತ್ತು ಕೀರ್ತಿ ಸುರಂಜನ್ ಇದ್ದರು.

ರಾಕ್ಷಸ-ತಂಗಡಿ ನಾಟಕ ಪ್ರಯೋಗವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.