ADVERTISEMENT

ಮೈಸೂರು ರಂಗಾಯಣ ನಾಟಕೋತ್ಸವ 22ರಿಂದ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2019, 14:25 IST
Last Updated 17 ಡಿಸೆಂಬರ್ 2019, 14:25 IST
‘ರೆಕ್ಸ್‌ ಹವರ್ಸ್‌’ ನಾಟಕದ ದೃಶ್ಯ
‘ರೆಕ್ಸ್‌ ಹವರ್ಸ್‌’ ನಾಟಕದ ದೃಶ್ಯ   

ಬೆಳಗಾವಿ: ಮೈಸೂರು ರಂಗಾಯಣ ಸಂಚಾರಿ ಘಟಕದ ‘ರಂಗಸಂಚಾರ 2019–20’ರಲ್ಲಿ ಮೂರು ದಿನಗಳ ನಾಟಕೋತ್ಸವವು ಡಿ. 22ರಿಂದ 24ರವರೆಗೆ ನಿತ್ಯ ಸಂಜೆ 7ಕ್ಕೆ ಇಲ್ಲಿನ ಚಿಂದೋಡಿಲೀಲಾ ರಂಗಮಂದಿರದಲ್ಲಿ ನಡೆಯಲಿದೆ.

22ರಂದು ಸಂಜೆ 7ಕ್ಕೆ ಗಿರೀಶ ಕಾರ್ನಾಡ ಅವರ ‘ಬೆಂದಕಾಳು ಆನ್ ಟೋಸ್ಟ್’ ನಾಟಕ ಪ್ರಯೋಗಗೊಳ್ಳಲಿದೆ. ನಿರ್ದೇಶನ ಚಿದಂಬರರಾವ ಜಂಬೆ ಅವರದು. 23ರಂದು ಸಂಜೆ 7ಕ್ಕೆ ‘ಅರ್ಕೇಡಿಯಾದಲ್ಲಿ ಪಕ್ ನಾಟಕ’ (ಒಂದು ಸಂಗೀತ ಪ್ರಹಸ) ನಡೆಯಲಿದೆ. ರಚನೆ ಎಸ್. ರಾಮನಾಥ್, ಪರಿಕಲ್ಪನೆ, ವಿನ್ಯಾಸ ಮತ್ತು ನಿರ್ದೇಶನ ಚಂದ್ರಹಾಸನ್ ಅವರದು.

24ರಂದು ಸಂಜೆ 7ಕ್ಕೆ ‘ರೆಕ್ಸ್ ಅವರ್ಸ್‌’– ಜಪಾನಿನ ಬುನ್ರಾಖು ಬೊಂಬೆಯಾಟ ಪ್ರಕಾರದ ಪ್ರಯೋಗ ಪ್ರದರ್ಶನಗೊಳ್ಳಲಿದೆ. ಪರಿಕಲ್ಪನೆ ಹಾಗೂ ನಿರ್ದೇಶನ ಶ್ರವಣಕುಮಾರ್ ಅವರದು. ಬೆಳಗಾವಿಯ ಯುನೈಟೆಡ್ ಸಮಾಜ ಕ್ಷೇಮಾಭಿವೃದ್ಧಿ ಸಂಘ, ದಾನೇಶ್ವರಿ ಸೇವಾ ಸಂಸ್ಥೆ, ಸೇವಕ ಸಂಸ್ಥೆ, ಕರ್ನಾಟಕ ರಂಗಭೂಮಿ ಸಹಕಾರಿ ಸಂಘ, ಮುನೀಶ್ವರ ಮೋಟರ್ಸ್, ವಿನುತ ಶ್ರೇಯ ಪ್ರಕಾಶನ ಸಂಯುಕ್ತ ಆಶ್ರಯದಲ್ಲಿ ನಾಟಕೋತ್ಸವ ನಡೆಯಲಿದೆ. ರಂಗಾಸಕ್ತರು ಭಾಗವಹಿಸಬೇಕು ಎಂದು ರಂಗಕರ್ಮಿ ಡಾ.ಡಿ.ಎಸ್. ಚೌಗಲೆ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.