ADVERTISEMENT

ಧಾರಾಕಾರ ಮಳೆಯಾಗುತ್ತಿದ್ದರೂ ನೀರಿಗೆ ಪರದಾಟ!

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2019, 8:46 IST
Last Updated 7 ಆಗಸ್ಟ್ 2019, 8:46 IST

ಬೆಳಗಾವಿ: ನಗರದಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಆದರೆ, ಕುಡಿಯುವ ನೀರು ಸರಬರಾಜು ಇಲ್ಲದೇ ಇರುವುದರಿಂದ ಜನರು ಜೀವ ಜಲಕ್ಕಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಭಾರಿ ಮಳೆಯಿಂದಾಗಿ ಹುಕ್ಕೇರಿ ತಾಲ್ಲೂಕಿನ ಹಿಂಡಲಗಾ ಪಂಪ್‌ಹೌಸ್ ಜಲಾವೃತವಾಗಿದ್ದು, ಆ ಪಂಪ್‌ ಕಾರ್ಯನಿರ್ವಹಿಸಲಾರದ ಸ್ಥಿತಿ ಇದೆ. ತಾಲ್ಲೂಕಿನ ರಕ್ಕಸಕೊಪ್ಪ ಜಲಾಶಯದಿಂದ ನೀರೆತ್ತುವ ಪಂಪ್ ಕೂಡ ಚಾಲನೆ ಮಾಡಲಾಗದ ಪರಿಸ್ಥಿತಿ. ಹೀಗಾಗಿ, ನಗರದಾದ್ಯಂತ ನೀರು ಪೂರೈಕೆಯಾಗಿಲ್ಲ. ಪರಿಣಾಮ, ಮಳೆಯಾಗುತ್ತಿದ್ದರೂ ನೀರಿಗೆ ಹಾಹಾಕಾರ ಎದುರಾಗಿದೆ.

ಕೆಲವರು ದಿನನಿತ್ಯದ ಬಳಕೆಗಾಗಿ, ಸಂಪ್‌ನಲ್ಲಿ ಸಂಗ್ರಹವಾಗಿದ್ದ ನೀರನ್ನು ಬಳಸಿದರು. ಕೆಲವರು, ಬಕೆಟ್‌ಗಳನ್ನು ಹೊರಗಡೆ ಇಟ್ಟು ಮಳೆ ನೀರು ಸಂಗ್ರಹಿಸಿಕೊಂಡು ಅದನ್ನೇ ಬಳಸಿದರು. ಧಾರಾಕಾರ ಮಳೆ ಇರುವುದರಿಂದಾಗಿ, ನೀರಿನ ಕ್ಯಾನ್‌ಗಳನ್ನು ತಂದುಕೊಡುವವರೂ ಸ್ಪಂದಿಸುತ್ತಿಲ್ಲ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.