ADVERTISEMENT

ಮಮದಾಪೂರ: ‘ಜ್ಞಾನಾಕ್ಷಯ’ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 23 ಜನವರಿ 2022, 12:59 IST
Last Updated 23 ಜನವರಿ 2022, 12:59 IST
ಗೋಕಾಕ ತಾಲ್ಲೂಕಿನ ಮಮದಾಪೂರ ಗ್ರಾಮದ ಚಿಂತಾಮಣಿ ಪಾವಟೆ ಪ್ರೌಢಶಾಲೆಯಲ್ಲಿ ನಡೆದ ‘ಜ್ಞಾನಾಕ್ಷಯ ಚಿಂತಕರ ಚಾವಡಿ’ ಕಾರ್ಯಕ್ರಮದಲ್ಲಿ ವಲಯ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಮಲ್ಲಿಕಾರ್ಜುನ ಪಾಟೀಲ ಮಾತನಾಡಿದರು
ಗೋಕಾಕ ತಾಲ್ಲೂಕಿನ ಮಮದಾಪೂರ ಗ್ರಾಮದ ಚಿಂತಾಮಣಿ ಪಾವಟೆ ಪ್ರೌಢಶಾಲೆಯಲ್ಲಿ ನಡೆದ ‘ಜ್ಞಾನಾಕ್ಷಯ ಚಿಂತಕರ ಚಾವಡಿ’ ಕಾರ್ಯಕ್ರಮದಲ್ಲಿ ವಲಯ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಮಲ್ಲಿಕಾರ್ಜುನ ಪಾಟೀಲ ಮಾತನಾಡಿದರು   

ಗೋಕಾಕ: ತಾಲ್ಲೂಕಿನ ಮಮದಾಪೂರ ಗ್ರಾಮದ ಚಿಂತಾಮಣಿ ಪಾವಟೆ ಪ್ರೌಢಶಾಲೆಯಲ್ಲಿ ಬಿ.ಬಿ. ಮಮದಾಪೂರ ಇಕೊ ಕ್ಲಬ್ ಹಾಗೂ ಗ್ರಾಮೀಣ ಶಾಲಾ ವಿಜ್ಞಾನ ಕೇಂದ್ರದ ವತಿಯಿಂದ ಹಮ್ಮಿಕೊಂಡಿರುವ ‘ಜ್ಞಾನಾಕ್ಷಯ–ಚಿಂತಕರ ಚಾವಡಿ’ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಮನೆಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುವುದು, ವಿಜ್ಞಾನ, ವೈಚಾರಿಕತೆ, ಆರೋಗ್ಯ, ಸಾಹಿತ್ಯ, ಸಂಸ್ಕೃತಿ, ಕಲೆ ಒಳಗೊಂಡಂತೆ ಹಲವಾರು ಪಾಕ್ಷಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಉದ್ದೇಶವನ್ನು ಈ ಕಾರ್ಯಕ್ರಮದ ಮೂಲಕ ಹೊಂದಲಾಗಿದೆ.

ಉದ್ಘಾಟಿಸಿದ ಗೋಕಾಕ ವಲಯ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಮಲ್ಲಿಕಾರ್ಜುನ ಪಾಟೀಲ ಮಾತನಾಡಿದರು. ಗ್ರಾ.ಪಂ. ಸದಸ್ಯೆ ವಿದ್ಯಾಶ್ರೀ ಕಮತ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ವಿಜಯಕುಮಾರ ಖನಗಾಂವಿ, ಶಿಕ್ಷಕಿಯರಾದ ಶೀಲಾ ಐನಾಪೂರ, ಸುಶೀಲಾ ಕುಂಬಾರ, ನಿರ್ಮಲಾ ಬೆಲ್ಲದ, ಭಾರತಿ ಜೋಡಂಗಿ, ಆಸ್ಮಾ ಮಿರ್ಜಾನಾಯಿಕ ಪಾಲ್ಗೊಂಡಿದ್ದರು.

ADVERTISEMENT

ಸುಷ್ಮಿತಾ ಪೂಜೇರಿ ಮತ್ತು ಸೌಂದರ್ಯಾ ಚಿಕ್ಕೋಡಿ ವಿಜ್ಞಾನ ಗೀತೆ ಪ್ರಸ್ತುತಪಡಿಸಿದರು.

ಕಾರ್ಯಕ್ರಮ ಸಂಚಾಲಕ ಆರ್.ವಿ. ದೇಮಶೆಟ್ಟಿ ನಿರೂಪಿಸಿದರು. ಪ್ರೀತಿ ಬ್ಯಾಹಟ್ಟಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.