
ಪ್ರಜಾವಾಣಿ ವಾರ್ತೆ
ಸಂಕೇಶ್ವರ: ಇಲ್ಲಿನ ಮಡ್ಡಿ ಗಲ್ಲಿಯಲ್ಲಿ ಭಾನುವಾರ ಮನೆಯ ಹಿತ್ತಲಲ್ಲಿ ಬಟ್ಟೆ ಒಣಗಿಸಲು ಹೋದ ಅಜ್ಜಿಗೆ ವಿದ್ಯುತ್ ಪ್ರವಹಿಸಿದಾಗ, ಆಕೆಯನ್ನು ರಕ್ಷಿಸಲು ಹೋದ ಮೊಮ್ಮಗನಿಗೂ ತಗುಲಿ ಇಬ್ಬರು ಸ್ಥಳದಲ್ಲಿ ಮೃತಪಟ್ಟಿದ್ದಾರೆ.
ಇವರಿಬ್ಬರನ್ನು ವಿದ್ಯುತ್ ಅವಘಡದಿಂದ ತಪ್ಪಿಸಲು ಹೋದ ಸೊಸೆ ಕೂಡ ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರನ್ನು ಶಾಂತವ್ವಾ ದುಂಡಪ್ಪಾ ಬಸ್ತವಾಡಿ (85) ಹಾಗೂ ಸಿದ್ದಾರ್ಥ ಬಾಪು ಬಸ್ತವಾಡಿ(30) ಎಂದು ಗುರುತಿಸಲಾಗಿದೆ. ಸಂಕೇಶ್ವರ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.