ಬೆಳಗಾವಿ: ತಾಲ್ಲೂಕಿನ ಉಚಗಾಂವ ಗ್ರಾಮದ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡ ವಸತಿ ಪ್ರದೇಶಕ್ಕೆ ಸೋಮವಾರ ನಸುಕಿನಲ್ಲಿ ಬಂದ ಕಾಡಾನೆಯು, ಮನೆ ಮುಂದಿದ್ದ ಕಾರಿಗೆ ಗುದ್ದಿ, ತುಳಿದು, ಉರುಳಿಸಿ ಜಖಂಗೊಳಿಸಿದೆ.
ಉಚಗಾಂವ- ಬೆಕ್ಕಿನಕೆರೆ ಮಾರ್ಗದಲ್ಲಿರುವ ಡಾ.ನಿರಂಜನ್ ಕದಂ ಅವರ ಮನೆ ಆವರಣಕ್ಕೆ ನುಗ್ಗಿದ ಕಾಡಾನೆ ಕಾರಿನ ಮೇಲೆ ದಾಳಿ ಮಾಡಿದೆ. ಸಮೀಪದಲ್ಲೇ ಇದ್ದ ಸಂಭಾಜೀರಾವ್ ಕದಂ ಮತ್ತು ಕಿರಣ್ ಕದಂ ಅವರ ಮನೆ ಬಳಿಯಿದ್ದ ಎರಡು ಪ್ಲಾಸ್ಟಿಕ್ ನೀರಿನ ಟ್ಯಾಂಕುಗಳನ್ನು ಕೂಡ ನಾಶಪಡಿಸಿದೆ.
ಈಚೆಗೆ ಬೆಳಗಾವಿ ತಾಲ್ಲೂಕಿನ ಧಾಮಣೆ ಗ್ರಾಮದಲ್ಲಿ ಈಚೆಗೆ ಆನೆಯ ದಾಳಿಯಿಂದ ರೈತರೊಬ್ಬರು ಮೃತಪಟ್ಟಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.