ADVERTISEMENT

ಸಂತ್ರಸ್ತರಿಗೆ ವಿಟಿಯು ವಿದ್ಯಾರ್ಥಿಗಳಿಂದ ನೆರವು

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2019, 12:14 IST
Last Updated 13 ಆಗಸ್ಟ್ 2019, 12:14 IST
ಬೆಳಗಾವಿಯಲ್ಲಿ ಪ್ರವಾಹಪೀಡಿತರಾದವರಿಗೆ ವಿಟಿಯು ಹಾಗೂ ವಿವಿಧ ಎಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳು ಆಹಾರ ಹಾಗೂ ಅಗತ್ಯ ಸಾಮಗ್ರಿಗಳನ್ನು ವಿತರಿಸಿದರು
ಬೆಳಗಾವಿಯಲ್ಲಿ ಪ್ರವಾಹಪೀಡಿತರಾದವರಿಗೆ ವಿಟಿಯು ಹಾಗೂ ವಿವಿಧ ಎಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳು ಆಹಾರ ಹಾಗೂ ಅಗತ್ಯ ಸಾಮಗ್ರಿಗಳನ್ನು ವಿತರಿಸಿದರು   

ಬೆಳಗಾವಿ: ಇಲ್ಲಿನ ವಿಶ್ವೇಶ್ವರಯ್ಯ ತಾ೦ತ್ರಿಕ ವಿಶ್ವವಿದ್ಯಾಲಯ (ವಿಟಿಯು), ಜಿಐಟಿ, ಅಂಗಡಿ ತಾಂತ್ರಿಕ ಕಾಲೇಜು, ಜೆಐಟಿ ಕಾಲೇಜು, ಆರ್.ಎಲ್.ಎಸ್. ಕಾಲೇಜು, ಒನ್ ನೇಷನ್ ಯೂಥ್‌ ಸಂಸ್ಥೆ ವತಿಯಿಂದ ಗೋಕಾಕ, ಹುಕ್ಕೇರಿ, ನಿಪ್ಪಾಣಿ ಹಾಗೂ ಬೆಳಗಾವಿ ತಾಲ್ಲೂಕುಗಳ ಪ್ರವಾಹ ಸಂತ್ರಸ್ತರಿಗೆ ನೆರವು ನೀಡಿದರು.

60 ಮಂದಿ ವಿವಿಧ ತಂಡ 2ಸಾವಿರ ಬ್ಲಾಂಕೆಟ್‌ಗಳು, 6ಸಾವಿರ ಆಹಾರ ಪೊಟ್ಟಣಗಳು, ₹ 50ಸಾವಿರ ಮೌಲ್ಯದ ಔಷಧಗಳು, ₹ 50ಸಾವಿರ ಮೌಲ್ಯದ ಬಿಸ್ಕೆಟ್‌ಗಳು, ₹ 10ಸಾವಿರ ಮೌಲ್ಯದ ಸ್ಯಾನಿಟರಿ ಪ್ಯಾಡ್‌ಗಳು, ₹ 10ಸಾವಿರ ಮೌಲ್ಯದ ಬಟ್ಟೆಗಳು, ₹ 10ಸಾವಿರ ಮೌಲ್ಯದ ಕುಡಿಯುವ ನೀರಿನ ಬಾಟಲಿಗಳನ್ನು ನಾಲ್ಕು ದಿನಗಳಿಂದ ವಿತರಿಸಿದರು.

ವಿಟಿಯು ಕುಲಪತಿ ಪ್ರೊ.ಕರಿಸಿದ್ದಪ್ಪ ಹಾಗೂ ಕುಲಸಚಿವ ಡಾ.ಎ.ಎಸ್. ದೇಶಪಾಂಡೆ ಮಾರ್ಗದರ್ಶನದಲ್ಲಿ, ಎನ್‌ಎಸ್‌ಎಸ್‌ ಘಟಕದ ಸಯೋಜಕ ಡಾ.ಅಪ್ಪಾಸಾಬ ಎಲ್.ವಿ. ಹಾಗೂ ಒನ್ ನೇಷನ್‌ ಯೂಥ್ ಸಂಸ್ಥೆ ಸಂಯೋಜಕ ಗಿರೀಶ ಬಡಿಗೇರ ಭಾಗವಹಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.