ಸವದತ್ತಿ: ‘12ನೇ ಶತಮಾನದಲ್ಲಿ ಅನುಭವ ಮಂಟಪ ಸ್ಥಾಪಿಸುವ ಮೂಲಕ ಬಸವಣ್ಣನವರು ಮೊದಲ ಬಾರಿಗೆ ಸಂಸತ್ತಿನ ಪರಿಕಲ್ಪನೆ ನೀಡಿದರು. ಇದು ಅರಿವಿನ ಮನೆ ಹಾಗೂ ಶರಣರು ನಿತ್ಯವೂ ತಮ್ಮ ಜೀವನಾನುಭವ ವಿನಮಿಯಿಸಿಕೊಂಡು ಸುಸ್ಥಿರ ಮತ್ತು ಸಮಗ್ರ ಅಭಿವೃದ್ಧಿ ಕುರಿತು ಚರ್ಚಿಸುವ ಸಂಗೋಷ್ಠಿಯಾಗಿತ್ತು’ ಎಂದು ಕಸ್ತೂರಿ ಹೂಲಿ ಹೇಳಿದರು.
ಬಸವ ಜಯಂತಿ ಅಂಗವಾಗಿ ಬೆಂಗಳೂರಿನ ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಳಗಾವಿಯ ಚಕೋರ ಸಾಹಿತ್ಯ ವಿಚಾರ ವೇದಿಕೆ ಹಾಗೂ ಜಾಗತಿಕ ಸವದತ್ತಿಯ ಲಿಂಗಾಯತ ಮಹಾಸಭಾ ಸಹಯೋಗದಲ್ಲಿ ಗುರುಭವನದಲ್ಲಿ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಅನುಭವ ಮಂಟಪದಲ್ಲಿ ಅಲ್ಲಮಪ್ರಭು, ಅಕ್ಕಮಹಾದೇವಿ, ಚನ್ನಬಸವಣ್ಣ ಹಾಗೂ ಅನೇಕ ಶರಣರು ಮಾನವೀಯ ಮೌಲ್ಯಗಳ ಮೂಲಕ ಏಕತೆಯ ಸಿದ್ಧಾಂತದ ತಳಹದಿಯ ವೈಚಾರಿಕತೆ ಪಸರಿಸಲು ಪ್ರಯತ್ನಿಸಿದರು. ಎಲ್ಲ ಸಮುದಾಯದ ಶರಣರು ಅನುಭಾವಿಗಳಾಗಿ ಚರ್ಚೆಯಲ್ಲಿ ಸಕ್ರಿಯರಾಗಿದ್ದರು’ ಎಂದರು.
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯೆ ಮೈತ್ರಾಯಿಣಿ ಗದಿಗೆಪ್ಪಗೌಡರ ಮಾತನಾಡಿದರು. ರಾಜೇಶ್ವರಿ ಪಟ್ಟಣಶೆಟ್ಟಿ, ನಾಗೇಶ ನಾಯಕ, ಸುರೇಖಾ ಮುನವಳ್ಳಿ, ರಮೇಶ ಮುನವಳ್ಳಿ, ಮಲ್ಲನಗೌಡ ದ್ಯಾಮನಗೌಡ್ರ, ಸುನಿತಾ ದ್ಯಾಮನಗೌಡ್ರ ಸೇರಿದಂತೆ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.