ತೆಲಸಂಗ (ಬೆಳಗಾವಿ): ‘2020-21ನೇ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ ಹವಾಮಾನ ಆಧಾರಿತ ಬೆಳೆ ವಿಮೆ (ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆ)ಗೆ ಅರ್ಜಿ ಸಲ್ಲಿಕೆಯ ದಿನಾಂಕವನ್ನು ವಿಸ್ತರಿಸಬೇಕು’ ಎಂದು ಇಲ್ಲಿನ ರೈತರು ಆಗ್ರಹಿಸಿದ್ದಾರೆ.
‘ಜೂನ್ 30ಕ್ಕೆ ಅವಧಿ ಅಂತ್ಯಗೊಳಿಸಲಾಗಿದೆ. ವಿಮೆ ಕಟ್ಟಲು ಹಣ ಇಲ್ಲದಕ್ಕೆ ಸಾಕಷ್ಟು ರೈತರು ವಂಚಿತರಾಗಿದ್ದಾರೆ. ಸತತ ಮೂರು ವರ್ಷಗಳಿಂದ ಒಂದಿಲ್ಲೊಂದು ಹೊಡೆತದಿಂದ ಬಳಲಿದ ನಾವು ಆರ್ಥಿಕ ಸಂಕಷ್ಟದಲ್ಲಿದ್ದೇವೆ. ಬಿತ್ತನೆ ಬೀಜಕ್ಕೆ ಸಾಲ ಮಾಡಿದ್ದೇವೆ ಮತ್ತು ರಸಗೊಬ್ಬರಕ್ಕೆ ಹಣ ಹೊಂದಿಸುವುದಕ್ಕೆ ಪರದಾಡುತ್ತಿದ್ದೇವೆ. ಹೀಗಿರುವಾಗ, ವಿಮೆ ಕಂತು ತುಂಬಲು ಹಣ ಜೋಡಿಸಲು ಸಮಯ ಬೇಕಾಗಿದೆ’ ಎಂದು ತಿಳಿಸಿದ್ದಾರೆ.
‘ಕಾಲಾವಕಾಶ ವಿಸ್ತರಿಸಿದರೆ ಅನುಕೂಲ ಆಗಲಿದೆ. ಮತಷ್ಟು ರೈತರು ಯೋಜನೆಗೆ ಒಳಪಡಲು ಸಾಧ್ಯವಾಗುತ್ತದೆ’ ಎಂದು ಅಶೋಕ ಮಾಳಿ, ಭೀಮಣ್ಣ ಹೊನವಾಡ, ಸುಧಾಕರ ಖೊಬ್ರಿ, ಸುನೀಲ ಕಾಳೆ, ಈರಪ್ಪ ರೊಟ್ಟಿ ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.