ADVERTISEMENT

ರೈತರಿಗಾಗಿ ಬೃಹತ್‌ ಗೋದಾಮು ಸಿದ್ಧ

ಕಟಕೋಳ, ತೋರಗಲ್, ಚುಂಚನೂರ, ತೊರನಗಟ್ಟಿ ಸಹಕಾರ ಸಂಘಗಳ ಸಾಧನೆ

​ಪ್ರಜಾವಾಣಿ ವಾರ್ತೆ
Published 31 ಜನವರಿ 2023, 6:01 IST
Last Updated 31 ಜನವರಿ 2023, 6:01 IST
ಕಟಕೋಳದಲ್ಲಿ ನಿರ್ಮಿಸಿದ ನೂತನ ಗೋದಾಮು ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಮಹಾದೇವಪ್ಪ ಯಾದವಾಡ ಹಾಗೂ ಶ್ರೀಗಳು ದೀ‍ಪ ಬೆಳಗಿಸಿದರು
ಕಟಕೋಳದಲ್ಲಿ ನಿರ್ಮಿಸಿದ ನೂತನ ಗೋದಾಮು ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಮಹಾದೇವಪ್ಪ ಯಾದವಾಡ ಹಾಗೂ ಶ್ರೀಗಳು ದೀ‍ಪ ಬೆಳಗಿಸಿದರು   

ಮುನವಳ್ಳಿ: ‘ಸುತ್ತಲಿನ ಹಳ್ಳಿಗಳ ರೈತರ ಧಾನ್ಯ ಸಂಗ್ರಹಕ್ಕಾಗಿ ನಬಾರ್ಡ್‌ ನೆರವಿನೊಂದಿಗೆ ಗೋದಾಮು ನಿರ್ಮಿಸಲಾಗಿದೆ. ರೈತರು ಇದರ ಸದುಪಯೋಗ ಮಾಡಿಕೊಳ್ಳಬೇಕು’ ಎಂದು ಶಾಸಕ ಮಹಾದೇವಪ್ಪ ಯಾದವಾಡ ಹೇಳಿದರು.

ಕಟಕೋಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸೇವಾ ಕೇಂದ್ರದಿಂದ ನಬಾರ್ಡ್‌ ಯೋಜನೆಯ ಅಡಿಯಲ್ಲಿ ನಿರ್ಮಿಸಲಾದ ತೋರಗಲ್, ಚುಂಚನೂರ, ತೊರನಗಟ್ಟಿ ಹಾಗೂ ಕಟಕೋಳ ಸಹಕಾರ ಸಂಘಗಳ ನೂತನ ಗೋದಾಮನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಗೋದಾಮು ಇಲ್ಲದ ಕಾರಣ ರೈತರು ತಮ್ಮ ಉತ್ಪನ್ನಗಳನ್ನು ಕೈಗೆ ಬಂದ ದರಕ್ಕೆ ಮಾಡುತ್ತಿದ್ದರು. ಇಂಥ ನಷ್ಟ ಇನ್ನು ಮುಂದೆ ಆಗುವುದಿಲ್ಲ. ರೈತರು ಇಲ್ಲಿ ತಮ್ಮ ಧಾನ್ಯಗಳನ್ನು ಸಂಗ್ರಹಿಸಿ ಇಟ್ಟು, ಉತ್ತಮ ದರ ಬಂದಾಗಲೇ ಮಾರಾಟ ಮಾಡಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ತಾಲ್ಲೂಕಿನ ಕೃಷಿ ಪತ್ತಿನ ಸಹಕಾರಿ ಸಂಘಗಳ 2006ರಲ್ಲಿ ನಷ್ಟದಲ್ಲಿದ್ದವು. 2023 ಜನವರಿವರೆಗೆ ರೈತರಿಗೆ ನೀಡಿದ ಸಾಲ ಶೇ 100ರಷ್ಟು ವಸೂಲಿ ಮಾಡಲಾಗಿದೆ. ಡಿಸಿಸಿ ಬ್ಯಾಂಕ್‌ ಅಡಿಯಲ್ಲಿ ತಾಲ್ಲೂಕಿನಾದ್ಯಂತ ಎಲ್ಲ ಸಂಘಗಳು ಉತ್ತಮ ಸ್ಥಿತಿಯಲ್ಲಿವೆ’ ಎಂದರು.

‘ಈಗಾಗಲೇ ತಾಲ್ಲೂಕಿನ ಎಲ್ಲ ಕೃಷಿ ಪತ್ತಿನ ಸಂಘಗಳೂ ಹೊಸ ಪತ್ತನ್ನು ಬರೆದಿದ್ದು, ರೈತರು ಅದನ್ನು ಪಡೆದುಕೊಳ್ಳಬೆಕು. ಕೃಷಿ ಸಲಕರಣೆಗಳು ಈ ಸಂಘಗಳ ಮೂಲಕ ಕಡಮೆ ಬೆಲೆಯಲ್ಲಿ ಸಿಗುತ್ತವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರಿಗಾಗಿ ಹಲುವಾರು ಯೋಜನೆಗಳನ್ನು ಜಾರಿ ಮಾಡಿವೆ. ಸಂಘಗಳ ಮೂಲಕ ಅವುಗಳನ್ನೂ ಬಳಸಿಕೊಳ್ಳಬೇಕು’ ಎಂದರು.

ಸಂಘದ ನಿವೃತ್ತ ವ್ಯವಸ್ಥಾಪಕ ನಿಂಗಣ್ಣ ದಂಡಿನದುರ್ಗ ಪ್ರಾಸ್ತಾವಿಕ ಮಾತನಾಡಿದರು. ಡಿಸಿಸಿ ಬ್ಯಾಂಕ್‌ ನಿರ್ದೇಶಕ ಎಸ್.ಎಸ್.ಢವಣ ಮಾತನಾಡಿದರು. ಸಂಘದ ಅಧ್ಯಕ್ಷ ಮಹಾದೇವ ಆತಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ವ್ಯವಸ್ಥಾಪಕ ಎಸ್.ಕೆ.ಅಳಗುಂಡಿ ರೈತರಿಗಾಗಿ ಬ್ಯಾಂಕಿನಿಂದ ಸಿಗುವ ಸೌಲಭ್ಯಗಳನ್ನು ವಿವರಿಸಿದರು.

ಸಾನ್ನಿಧ್ಯ ವಹಿಸಿದ್ದ ವೀರಭದ್ರ ಶಿವಯೋಗಿ ಶಿವಾಚಾರ್ಯ ಶ್ರೀ, ಸಚ್ವಿದಾನಂದ ಶ್ರೀ, ನಾಗಭೂಷಣ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗಿರೀಶ ಯಾವಗಲ್‌, ಆರ್.ಎಸ್.ವಾಲಿ, ಎಸ್.ಎಸ್. ಜಂಬಗಿ, ವಿಜಯ ನಾಯಕ, ಪಂಚಾಕ್ಷರಿ ಹಳಿಹಾಳ, ಬಾಲಪ್ಪ ತೆಗ್ಗಿಹಾಳ, ಸೋಮನಗೌಡ ಮಲಗೌಡ್ರ, ಎನ್.ಜಿ. ತಳವಾರ, ಜಿ.ಎಂ. ಪಾಟೀಲ, ಎಸ್.ಕೆ ಅಳಗುಂಡಿ, ಎಸ್.ಕೆ. ಬಾರದ್ವಾಜ್, ಸರಸ್ವತಿ ನಿಂಗನ್ನವರ, ಗೌರವ್ವ ಕುರುಬೇಟ, ಸುಕನ್ಯಾ‌ ಕುಂಬಾರ ಅತಿಥಿಗಳಾಗಿ ‍ಪಾಲ್ಗೊಂಡರು.

ಆರ್‌.ಎ. ಹಾವಣಿ ಸ್ವಾಗತಿಸಿದರು. ಪ್ರಾಚಾರ್ಯರಾದ ರೂಪಾ ಬಣಶೆಟ್ಟಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.