ADVERTISEMENT

ಐವರು ಶತಾಯುಷಿಗಳಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 28 ಜನವರಿ 2023, 6:30 IST
Last Updated 28 ಜನವರಿ 2023, 6:30 IST
ಅಂಕಲಗಿ ಸಮೀಪದ ಮಿಡಕನಟ್ಟಿ ಗ್ರಾಮದಲ್ಲಿ ಶುಕ್ರವಾರ ಕಾರಗಿ ಪರಿವಾರದಿಂದ ಐವರು ಶತಾಯುಷಿಗಳನ್ನು ಸನ್ಮಾನಿಸಲಾಯಿತು
ಅಂಕಲಗಿ ಸಮೀಪದ ಮಿಡಕನಟ್ಟಿ ಗ್ರಾಮದಲ್ಲಿ ಶುಕ್ರವಾರ ಕಾರಗಿ ಪರಿವಾರದಿಂದ ಐವರು ಶತಾಯುಷಿಗಳನ್ನು ಸನ್ಮಾನಿಸಲಾಯಿತು   

ಅಂಕಲಗಿ: ಹಿರಿಯರು ನಮ್ಮ ಇಂದಿನ ಬಹು ದೊಡ್ಡ ಆಸ್ತಿ. ಅವರ ನಡೆ, ನುಡಿ, ಆದರ್ಶಗಳು ನಮಗೆಲ್ಲ ಸ್ಫೂರ್ತಿ ಎಂದು ಸತೀಶ ಶುಗರ್ಸ್‌ನ ಉಪಾಧ್ಯಕ್ಷ ಎಲ್.ಆರ್.ಕಾರಗಿ ಹೇಳಿದರು.

ಸಮೀಪದ ಮಿಡಕನಟ್ಟಿ ಗ್ರಾಮದಲ್ಲಿ ಶುಕ್ರವಾರ ಶತಾಯುಷಿಗಳಿಗಾಗಿ ಹಮ್ಮಿಕೊಂಡ ಶತಮಾನೋತ್ಸವ ಸಮಾರಂಭದಲ್ಲಿ ಐವರು ಶತಾಯುಷಿಗಳನ್ನು ಕಾರಗಿ ಪರಿವಾರದ ಪರವಾಗಿ ಸನ್ಮಾನಿಸಿ ಮಾತನಾಡಿದರು.

ಶತಾಯುಷಿಗಳಾದ ರಾಮಸಿದ್ದಪ್ಪ ಹಾಲಪ್ಪ ಕಾರಗಿ (105), ಹಾಲಪ್ಪ ಸಿದ್ದಪ್ಪ ಸಂಸುದ್ದಿ (104), ಶಿವಲಿಂಗಪ್ಪ ಶಿದ್ಲಿಂಗಪ್ಪ ಪಾಟೀಲ (ನಬಾಪೂರ)–102), ಭೀಮಪ್ಪ ಹನುಮಂತಪ್ಪ ಹೊಸೂರ (103) ಸನ್ಮಾನ ಪಡೆದರು.

ADVERTISEMENT

ಡಾ.ವಿನೋದ ಕಾರಗಿ, ಮಹಾಂತೇಶ ಕಾರಗಿ ಸೇರಿದಂತೆ ಗ್ರಾಮಸ್ಥರು, ಅಭಿಮಾನಿಗಳು ಇದ್ದರು. ನಿವೃತ್ತ ಮುಖ್ಯ ಶಿಕ್ಷಕ ಬಸವರಾಜ ಕಾರಗಿ ನಿರೂಪಿಸಿದರು. ಮಹಾಂತೇಶ ಕಾರಗಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.