ಮುನವಳ್ಳಿ: ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ಗ್ರಾಮ ದೇವತೆಯರು ಸೀಮೆಗೆ ಹೋದವು ಮಧ್ಯಾಹ್ನ ದೇವಿಯ ಪೂಜೆ ಭಂಡಾರ ಒಡೆದು ಭಕ್ತರು ಭಂಡಾರ ಎರಚುವ ಮೂಲಕ ಊರಿನ ಪ್ರಮೂಖ ಬೀದಿಗಳಲ್ಲಿ ಹಾಯ್ದು ಭಕ್ತರ
ಮನೆಗಳಿಗೆ ದರ್ಶನ ನೀಡಿದವು. ನಂತರ ಶ್ರೀ ಕರವೀರಮ್ಮ ದೇವಿ ದೇವಸ್ಥಾನಕ್ಕೆ ತಲುಪಿ ದೆವಸ್ಥಾನದ ಸಿಡಿಗಂಭದ ಮುಂದೆ ಹೊನ್ನಾಟ ಆಡಿ ಕಟಕೋಳ ಗ್ರಾಮವು ಭಂಡಾರಮಯ ವಾಗಿತ್ತು. ನಂತರ ಗೊಡಚಿ ಕ್ರಾಸನಲ್ಲಿ ಕರವೀರಮ್ಮ ದೇವಿ ಜೋತೆಗೂಡಿ ಹೊನ್ನಾಟ ಆಡಿ ಸೀಮೆಗೆ ತೆರಳಿದವು.
ಭಕ್ತರು ಭಂಡಾರ ಎರಚುತ್ತಾ ಊದೂ ಊದೂ ಎಂದು ಗೋಷನೆ ಮೂಲಕ ಗ್ರಾಮದೇವಿಯರ ಪಲ್ಲಕ್ಕಿಯನ್ನು ಕಟಕೋಳ ಗ್ರಾಮದ ಪ್ರತಿ ಮನೆ ಮನೆಗೂ ದರ್ಶನ ನೀಡಿದವು. ಕಟಕೋಳ ಗ್ರಾಮವು ಭಂಡಾರಮಯ ವಾಗಿತ್ತು. ಜಾತ್ರಾಕಮನಿಟಿಯವರು ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಸಹಸ್ರಾರು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.