ADVERTISEMENT

ಬೆಂಕಿ ಅವಘಡ: ಅಪಾರ ಹಾನಿ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2022, 5:29 IST
Last Updated 24 ನವೆಂಬರ್ 2022, 5:29 IST
ನಿಪ್ಪಾಣಿಯಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಭಸ್ಮವಾದ ಅಂಗಡಿಗಳು
ನಿಪ್ಪಾಣಿಯಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಭಸ್ಮವಾದ ಅಂಗಡಿಗಳು   

ನಿಪ್ಪಾಣಿ: ಬೆಂಕಿ ಹೊತ್ತಿಕೊಂಡ ಪರಿಣಾಮ 3 ಅಂಗಡಿಗಳು ಸುಟ್ಟು ಲಕ್ಷಾಂತರ ರೂಪಾಯಿ ಹಾನಿಯಾದ ಘಟನೆ ನಗರದ ಹಳೆಯ ಪುಣೆ-ಬೆಂಗಳೂರು ಹೆದ್ದಾರಿಯ ಬದಿಗಿರುವ ನಗರಸಭೆ ಬಳಿ ಮಂಗಳವಾರ ಮಧ್ಯರಾತ್ರಿ ನಡೆದಿದೆ.

ಮಹೇಶ ವಿಲಾಸ ಚವಾಣ ಅವರಿಗೆ ಸೇರಿದ ಪ್ರಿಂಟಿಂಗ್ ಪ್ರೆಸ್, ಓಂಕಾರ ರವಿಂದ್ರ ಭೋಯಿಟೆ ಅವರಿಗೆ ಸೇರಿದ ಹಣ್ಣು-ಹಂಪಲು ಅಂಗಡಿ ಮತ್ತು ನವಾಜ ಗಫಾರ ಕಡಗಿ ಅವರಿಗೆ ಸೇರಿದ ಕಡಗಿ ಐರನ್‌ ಆ್ಯಂಡ್ ಸ್ಟೀಲ್ ವರ್ಕ್ಸ್ ಈ ಅಂಗಡಿಗಳಿಗೆ ಹಾನಿಯಾಗಿದೆ.

ಮಧ್ಯರಾತ್ರಿ ಸುಮಾರು 2 ಗಂಟೆಗೆ ದಟ್ಟ ಹೊಗೆ ಕಾಣಿಸಿಕೊಂಡಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಎರಡು ವಾಹನಗುಳಲ್ಲಿ ಬಂದು ಅಗ್ನಿ ನಂದಿಸಿ ಹೆಚ್ಚಿನ ಅನಾಹುತವನ್ನು ತಪ್ಪಿಸಿದರು.

ADVERTISEMENT

ತಹಶೀಲ್ದಾರ್‌ ಪ್ರವೀನ ಕಾರಂಡೆ, ಚಿಕ್ಕೋಡಿ ಡಿವೈಎಸ್ಪಿ ಬಸವರಾಜ ಯಲಿಗಾರ, ಸಿಪಿಐ ಸಂಗಮೇಶ ಶಿವಯೋಗಿ, ಪೌರಾಯುಕ್ತ ಜಗದೀಶ ಹುಲಿಗೆಜ್ಜೆ, ಘಟನಾ ಸ್ಥಳಕ್ಕೆ ಭೇಟಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.