ADVERTISEMENT

ಗೋಕಾಕ: ‘ವ್ಯಸನಮುಕ್ತ ಸಮಾಜದಿಂದ ಎಲ್ಲರಿಗೂ ನಮ್ಮದಿ’

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2021, 16:39 IST
Last Updated 2 ಅಕ್ಟೋಬರ್ 2021, 16:39 IST
ಗೋಕಾಕದಲ್ಲಿ ಗಾಂಧಿ ಜಯಂತಿ ನಿಮಿತ್ತ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆಯಿಂದ ಹಮ್ಮಿಕೊಂಡಿದ್ದ ಗಾಂಧಿಸ್ಮೃತಿ ಮತ್ತು ವ್ಯಸನಮುಕ್ತ ಸಾಧಕರ ಸಮಾವೇಶವನ್ನು ಪ್ರೊಬೇಷನರಿ ಡಿವೈಎಸ್ಪಿ ಡಿ.ಎಚ್. ಮುಲ್ಲಾ ಉದ್ಘಾಟಿಸಿದರು. ಸೋಮಶೇಖರ ಮಗದುಮ್, ನಗರಸಭೆ ಪ್ರಭಾರ ಪೌರಾಯುಕ್ತ ಶಿವಾನಂದ ಹಿರೇಮಠ, ಬಿಇಒ ಜಿ.ಬಿ. ಬಳಗಾರ, ನಾಗಲಿಂಗ ಪೋತದಾರ, ಚಿನ್ಮಯ ಹಿರೇಮಠ, ಕೇಶವ ದೇವಾಂಗ ಇದ್ದಾರೆ

ಗೋಕಾಕ: ‘ವ್ಯಸನಮುಕ್ತ ಸಮಾಜ ನಿರ್ಮಾಣದಿಂದ ಎಲ್ಲರಿಗೂ ನೆಮ್ಮದಿ ಸಿಗುವುದರೊಂದಿಗೆ ಆರೋಗ್ಯವಂತ ಬದುಕು ಸಾಧ್ಯ’ ಎಂದು ಪ್ರೊಬೆಷನರಿ ಡಿವೈಎಸ್ಪಿ ಡಿ.ಎಚ್. ಮುಲ್ಲಾ ಹೇಳಿದರು.

ಇಲ್ಲಿನ ನಗರಸಭೆ ಸಮುದಾಯ ಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆಯ ಸಹಯೋದಲ್ಲಿಶನಿವಾರ ಗಾಂಧಿ ಜಯಂತಿ ನಿಮಿತ್ತ ಹಮ್ಮಿಕೊಂಡಿದ್ದ ‘ಗಾಂಧಿ ಸ್ಮೃತಿ ಮತ್ತು ವ್ಯಸನಮುಕ್ತ ಸಾಧಕರ ಸಮಾವೇಶ’ ಉದ್ಘಾಟಿಸಿ ಅವರು ಮಾತನಾಡಿದರು.

‘ದುಶ್ಚಟಗಳಿಂದ ದೂರವಿದ್ದು, ಸಮಾಜಮುಖಿ ಜೀವನ ಸಾಗಿಸಬೇಕು’ ಎಂದರು.

ADVERTISEMENT

ಪೌರಕಾರ್ಮಿಕರನ್ನು ಸತ್ಕರಿಸಲಾಯಿತು. ನಗರಸಭೆ ಪ್ರಭಾರ ಪೌರಾಯುಕ್ತ ಶಿವಾನಂದ ಹಿರೇಮಠ, ಬಿಇಒ ಜಿ.ಬಿ. ಬಳಗಾರ, ಜನಜಾಗೃತಿ ವೇದಿಕೆಯ ಸೋಮಶೇಖರ ಮಗದುಮ, ನಾಗಲಿಂಗ ಪೋತದಾರ, ಚಿನ್ಮಯ ಹಿರೇಮಠ, ಗ್ರಾಮಾಭಿವೃದ್ಧಿ ಯೋಜನಾ ಜಿಲ್ಲಾ ನಿರ್ದೇಶಕ ಕೇಶವ ದೇವಾಂಗ ಇದ್ದರು.

ಸುರೇಶ ಹಾಲವರ ಸ್ವಾಗತಿಸಿದರು. ಸತೀಶ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.