ADVERTISEMENT

‘ವೇವ್ಸ್’ ಮೇಳ: ಜಿಐಟಿ ರಾಷ್ಟ್ರೀಯ ಚಾಂಪಿಯನ್

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2019, 10:32 IST
Last Updated 21 ನವೆಂಬರ್ 2019, 10:32 IST
ಗೋವಾದ ಬಿರ್ಲಾ ತಾಂತ್ರಿಕ ಕಾಲೇಜು ಈಚೆಗೆ ಹಮ್ಮಿಕೊಂಡಿದ್ದ ರಾಷ್ಟ್ರಮಟ್ಟದ ಅಂತರ ಕಾಲೇಜು (ಬಿಟ್ಸ್ -ಗೋವಾ) ‘ವೇವ್ಸ್ –19’ ಸಾಂಸ್ಕೃತಿಕ ಮೇಳದಲ್ಲಿ ಬೆಳಗಾವಿಯ ಜಿಐಟಿ ಕಾಲೇಜು ತಂಡದವರು ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದಿದ್ದಾರೆ
ಗೋವಾದ ಬಿರ್ಲಾ ತಾಂತ್ರಿಕ ಕಾಲೇಜು ಈಚೆಗೆ ಹಮ್ಮಿಕೊಂಡಿದ್ದ ರಾಷ್ಟ್ರಮಟ್ಟದ ಅಂತರ ಕಾಲೇಜು (ಬಿಟ್ಸ್ -ಗೋವಾ) ‘ವೇವ್ಸ್ –19’ ಸಾಂಸ್ಕೃತಿಕ ಮೇಳದಲ್ಲಿ ಬೆಳಗಾವಿಯ ಜಿಐಟಿ ಕಾಲೇಜು ತಂಡದವರು ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದಿದ್ದಾರೆ   

ಬೆಳಗಾವಿ: ಗೋವಾದ ಬಿರ್ಲಾ ತಾಂತ್ರಿಕ ಕಾಲೇಜು ಈಚೆಗೆ ಹಮ್ಮಿಕೊಂಡಿದ್ದ ರಾಷ್ಟ್ರಮಟ್ಟದ ಅಂತರ ಕಾಲೇಜು (ಬಿಟ್ಸ್ -ಗೋವಾ) ‘ವೇವ್ಸ್ –19’ ಸಾಂಸ್ಕೃತಿಕ ಮೇಳದಲ್ಲಿ ಇಲ್ಲಿನ ಜಿಐಟಿ ಕಾಲೇಜು ತಂಡದವರು ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದಿದ್ದಾರೆ.

ದೇಶದ 50 ಸಂಸ್ಥೆಗಳಿಂದ ಸಾವಿರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಜಿಐಟಿ ವಿದ್ಯಾರ್ಥಿಗಳು ನಾಟ್ಯಾಂಜಲಿ (ಥೀಮ್ಯಾಟಿಕ್ ಗ್ರೂಪ್ ಡ್ಯಾನ್ಸ್), ಫ್ಯಾಷನ್ ಪೆರೇಡ್, ರಂಗಮಂಚ್ (ನಾಟಕ), ಅವಂತ್-ಗಾರ್ಡ್ (ಫ್ಯಾಷನ್ ಡಿಸೈನಿಂಗ್), ಕಲ್ಚರಲ್ ಗೌಂಟ್ಲೆಟ್ (ಸಾಂಸ್ಕೃತಿಕ), ಮೊಟೀಫ್ (ಟಿ-ಶರ್ಟ್ ಪೇಂಟಿಂಗ್), ಆರ್ಟ್ ಥಾನ್ (ಲಲಿತ ಕಲೆ) ಮತ್ತು ಕಸದಿಂದ ರಸ ವಿಭಾಗದ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ನುಕ್ಕಡ್ ನಾಟಕ (ಬೀದಿ ನಾಟಕ)ದಲ್ಲಿ 2ನೇ ಸ್ಥಾನ, ಇಂಡಿಯನ್ ರಾಕ್ (ಸಂಗೀತ), ಸೈಲೆನ್ಸ್ ಈಸ್ ಆಂಪ್ಸ್ (ಸಂಗೀತ), ಮೊಟೀಫ್ (ಟಿ- ಶರ್ಟ್ ಪೇಂಟಿಂಗ್) ಹಾಗೂ ಹಲವು ವೈಯಕ್ತಿಕ ವಿಭಾಗಗಳಲ್ಲಿ ಬಹುಮಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಕಾಲೇಜಿನ ಪ್ರಾಂಶುಪಾಲ ಪ್ರೊ.ಡಿ.ಎ. ಕುಲಕರ್ಣಿ, ಸಾಂಸ್ಕೃತಿಕ ಚಟುವಟಿಕೆಗಳ ಸಂಯೋಜಕ ಪ್ರೊ.ಶಿವಕುಮಾರ, ಪ್ರೊ.ಅಭಿಷೇಕ್ ದೇಶಮುಖ, ಪ್ರೊ.ಪ್ರಿಯಾಂಕಾ ದೇಶಮುಖ, ಪ್ರೊ.ತೇಜರಾಜ್ ಕಿಂಕರ್ ಹಾಗೂ ಪ್ರೊ.ಕುಲದೀಪ್ ಸಂಬ್ರೇಕರ್ ಮಾರ್ಗದರ್ಶನದಲ್ಲಿ 80 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ADVERTISEMENT

ಅವರನ್ನು ಕೆಎಲ್‌ಎಸ್‌ ಸಂಸ್ಥೆ ಕಾರ್ಯಾಧ್ಯಕ್ಷ ಪಿ.ಎಸ್. ಸಾವಕಾರ, ಜಿಐಟಿ ಆಡಳಿತ ಮಂಡಳಿ ಅಧ್ಯಕ್ಷ ಎಂ.ಆರ್. ಕುಲಕರ್ಣಿ, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.