ADVERTISEMENT

ಜಾನುವಾರು ಆರೋಗ್ಯ ರಕ್ಷಣೆಗೆ ಒತ್ತು

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2020, 13:25 IST
Last Updated 17 ಅಕ್ಟೋಬರ್ 2020, 13:25 IST
ನಾಗರಮುನ್ನೋಳಿ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ನಡೆದ ಟ್ಯಾಬ್ ವಿತರಣೆ ಕಾರ್ಯಕ್ರಮಕ್ಕೆ ಬೆಮುಲ್ ನಿರ್ದೇಶಕ ವಿ.ಬಿ. ಈಟಿ ಚಾಲನೆ ನೀಡಿದರು
ನಾಗರಮುನ್ನೋಳಿ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ನಡೆದ ಟ್ಯಾಬ್ ವಿತರಣೆ ಕಾರ್ಯಕ್ರಮಕ್ಕೆ ಬೆಮುಲ್ ನಿರ್ದೇಶಕ ವಿ.ಬಿ. ಈಟಿ ಚಾಲನೆ ನೀಡಿದರು   

ನಾಗರಮುನ್ನೋಳಿ: ‘ಗ್ರಾಮೀಣ ಭಾಗದಲ್ಲಿ ಜಾನುವಾರು ಆರೋಗ್ಯದ ಮೇಲೆ ಹೆಚ್ಚಿನ ನಿಗಾ ವಹಿಸಲಾಗುತ್ತಿದೆ. ಇದಕ್ಕಾಗಿ ಹೊಸ ಮಾದರಿ ತಂತ್ರಜ್ಞಾನ ಬಳಸಲಾಗುತ್ತಿದೆ’ ಎಂದು ಬೆಮುಲ್ ನಿರ್ದೇಶಕ ವಿ.ಬಿ. ಈಟಿ ಹೇಳಿದರು.

ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ಜಿಲ್ಲಾ ಸಹಕಾರಿ ಹಾಲು ಒಕ್ಕೂಟದಿಂದ ಚಿಕ್ಕೋಡಿ ವಿಭಾಗದ ಕೃತಕ ಗರ್ಭಧಾರಣೆ ಕಾರ್ಯಕ್ರಮದಲ್ಲಿ ಸಿಬ್ಬಂದಿಗೆ ಟ್ಯಾಬ್‌ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ನಮ್ಮ ಜಿಲ್ಲೆಯವರೆ ಆದ ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ಮಾರ್ಗದರ್ಶದಲ್ಲಿ ಹೈನುಗಾರಿಕೆಯಲ್ಲಿ ಪ್ರಗತಿ ಸಾಧಿಸಲು ಹಾಗೂ ಜಿಲ್ಲೆಯನ್ನು ಮಾದರಿಯಾಗಿಸಲು ಹಲವು ಯೋಜನೆ ಜಾರಿಗೆ ತರಲಾಗುತ್ತಿದೆ’ ಎಂದರು.

ADVERTISEMENT

ಬೆಮುಲ್‌ನ ಅಧಿಕಾರಿ ಡಾ.ಜಯಪ್ರಕಾಶ ಮಣ್ಣೇರಿ, ಡಾ.ವೆಂಕಟೇಶ ಜೋಶಿ ಮಾತನಾಡಿದರು.

ಡಾ.ಭಾಗ್ಯಶ್ರೀ, ಶ್ರೀಶೈಲ ಪೂಜೇರಿ, ಪುಂಡಲಿಕ ಈಟಿ ಇದ್ದರು.

ಡಾ.ಸುನೀಲ ಕುಂಬಾರ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.