ADVERTISEMENT

ಪ್ರಾಂಶುಪಾಲರ ಸಂಘದ ಅಧ್ಯಕ್ಷರಾಗಿ ತಿಮ್ಮಾಪುರ ಆಯ್ಕೆ

​ಪ್ರಜಾವಾಣಿ ವಾರ್ತೆ
Published 29 ಜುಲೈ 2021, 15:24 IST
Last Updated 29 ಜುಲೈ 2021, 15:24 IST
ಬೆಳಗಾವಿಯ ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ವ್ಯಾಪ್ತಿಯ ಅನುದಾನಿತ ಮಹಾವಿದ್ಯಾಲಯಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಡಾ.ಎಚ್.ಐ. ತಿಮ್ಮಾಪುರ ಅವರನ್ನು ಅಂಜುಮನ್ ಮಹಾವಿದ್ಯಾಲಯದವರು ಅಭಿನಂದಿಸಿದರು
ಬೆಳಗಾವಿಯ ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ವ್ಯಾಪ್ತಿಯ ಅನುದಾನಿತ ಮಹಾವಿದ್ಯಾಲಯಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಡಾ.ಎಚ್.ಐ. ತಿಮ್ಮಾಪುರ ಅವರನ್ನು ಅಂಜುಮನ್ ಮಹಾವಿದ್ಯಾಲಯದವರು ಅಭಿನಂದಿಸಿದರು   

ಬೆಳಗಾವಿ: ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ವ್ಯಾಪ್ತಿಯ ಅನುದಾನಿತ ಮಹಾವಿದ್ಯಾಲಯಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷರಾಗಿ ಡಾ.ಎಚ್.ಐ.
ತಿಮ್ಮಾಪುರ ಅವರನ್ನು ಆಯ್ಕೆ ಮಾಡಲಾಗಿದೆ.

ಇಲ್ಲಿನ ಅಂಜುಮನ್ ಮಹಾವಿದ್ಯಾಲಯದಲ್ಲಿ ಗ್ರೇಡ್-1 ಪ್ರಾಂಶುಪಾಲರಾಗಿ ತಿಮ್ಮಾಪುರ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಿಂಡಿಕೇಟ್ ಹಾಗೂ ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾಗಿ ಮತ್ತು ಅನೇಕ ಸಾಹಿತ್ಯಕ ಸಾಂಸ್ಕೃತಿಕ ಸಂಘಟನೆಗಳ
ಪದಾಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಬೆಳಗಾವಿ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಯಲ್ಲಿರುವ ಅನುದಾನಿತ ಎಲ್ಲ ಪದವಿ ಮಹಾವಿದ್ಯಾಲಯಗಳು ಈ ಸಂಘಟನೆಯ ವ್ಯಾಪ್ತಿಯಲ್ಲಿ ಬರುತ್ತವೆ.

ಅಂಜುಮನ್ ಮಹಾವಿದ್ಯಾಲಯದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ತಿಮ್ಮಾಪುರ ಅವರನ್ನು ಸನ್ಮಾನಿಸಿದರು. ಅಂಜುಮನ್ ಸಂಸ್ಥೆಯ ವ್ಯವಸ್ಥಾಪಕ ರಾಜು ಸೇಠ್‌, ಕಾರ್ಯದರ್ಶಿ ಸಮೀವುಲ್ಲಾ ಮಹಡಿವಾಲೆ ಅಭಿನಂದಿಸಿದ್ದಾರೆ. ಸಿಬ್ಬಂದಿ ಬಿ.ಟಿ. ಮುಗುಟ, ಎಂ.ಮಾಹಿನ್. ಎಸ್.ಎ. ಮುಲ್ಲಾ, ಐ.ಬಿ. ತಹಶೀಲ್ದಾರ್, ಎ.ಐ. ಸುತಾರ ಹಾಗೂ ಟಿ.ಎನ್. ಕೊತವಾಲ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.