ಹುಕ್ಕೇರಿ ತಾಲ್ಲೂಕಿನ ಹಿಡಕಲ್‌ನ ರಾಜಾ ಲಖಮಗೌಡ ಜಲಾಶಯದ 10 ಕ್ರೆಸ್ಟ್ ಗೇಟ್‌ಗಳ ಮೂಲ ಬುಧವಾರ ಘಟಪ್ರಭಾ ನದಿಗೆ ನೀರು ಹರಿಸಲಾಯಿತು
ಹುಕ್ಕೇರಿ: ಘಟಪ್ರಭಾ ನದಿಗೆ ನಿರ್ಮಿಸಲಾದ ಇಲ್ಲಿನ ರಾಜಾ ಲಖಮಗೌಡ ಜಲಾಶಯ (ಹಿಡಕಲ್ ಡ್ಯಾಂ)ದಿಂದ ಬುಧವಾರ, ಎಲ್ಲ ಹತ್ತು ಕ್ರೆಸ್ಟ್ ಗೇಟ್‌ಗಳನ್ನು ತೆರೆದು 10 ಸಾವಿರ ಕ್ಯುಸೆಕ್ ನೀರು ನದಿಗೆ ಬಿಡಲಾಯಿತು.
ಜಲಾಶಯದಿಂದ ಮಧ್ಯಾಹ್ನ 4.30ರ ಸುಮಾರಿಗೆ ನೀರು ಹರಿಬಿಡಲಾಯಿತು. ಜಲಾಶಯವು ಶೇ 90ರಷ್ಟು ಭರ್ತಿಯಾಗಿದೆ. ಬುಧವಾರ ಜಲಾಶಯದ ಗರಿಷ್ಠ ನೀರಿನ ಮಟ್ಟ 2,175 ಅಡಿ. ಬುಧವಾರ 2165 ಅಡಿ ತಲುಪಿದೆ. 31,153 ಕ್ಯುಸೆಕ್ ಒಳಹರಿವು ನಿರಂತರ ಇದೆ.
ಮಹಾರಾಷ್ಟ್ರ ಹಾಗೂ ಘಟಪ್ರಭಾ ಜಲಾನಯನ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಮುಂದುವರಿದಿದೆ. ಒಳ ಹರಿವು ಹೆಚ್ಚಾದರೆ ನದಿಗೆ ನೀರು ಹರಿಸುವ ಪ್ರಮಾಣವನ್ನು 20 ಸಾವಿರ ಕ್ಯುಸೆಕ್‌ಗೆ ಏರಿಸಲಾಗುವುದು ಎಂದು ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅರವಿಂದ ಜಮಖಂಡಿ ‘ಪ್ರಜಾವಾಣಿ’ಗೆ ತಿಳಿಸಿದರು.
ನದಿ ನೀರು ಬಿಟ್ಟಿದ್ದರಿಂದ ತೀರದ ಜನರ ಎಚ್ಚರಿಕೆ ವಹಿಸಬೇಕು ಎಂದೂ ಅಧಿಕಾರಿಗಳು ಮುನ್ಸೂಚನೆ ನೀಡಿದ್ದಾರೆ. ತಹಶೀಲ್ದಾರ ಮಂಜುಳಾ ನಾಯಕ್ ಮತ್ತು ಕರ್ನಾಟಕ ನೀರಾವರಿ ನಿಗಮದ ಎಂಜಿನಿಯರ್‌ಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.