ಹುಕ್ಕೇರಿ: ತೋಟದ ಮನೆಗಳಿಗೆ ನಿರಂತರ ಮತ್ತು ಗುಣಮಟ್ಟದ ವಿದ್ಯುತ್ ಸರಬರಾಜು ಮಾಡಬೇಕಾಗಿದ್ದ ಬಹುದಿನದ ಕನಸು ಕೇವಲ 3 ತಿಂಗಳಲ್ಲಿ ಈಡೇರಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ, ಗೃಹಿಣಿಯರಿಗೆ ತುಂಬಾ ಅನುಕೂಲವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಅವರು ತಾಲ್ಲೂಕಿನ ಎಲಿಮುನ್ನೋಳಿ ಗ್ರಾಮದ ತೋಟಪಟ್ಟಿಯ ಮನೆಗಳಿಗೆ ₹3.61 ಕೋಟಿ ವೆಚ್ಚದ ನಿರಂತರ ವಿದ್ಯುತ್ ಪೂರೈಕೆ ಕಾಮಗಾರಿಗೆ ಚಾಲನೆ ನೀಡಿ ಭಾನುವಾರ ಮಾತನಾಡಿದರು.
ಸಹಕಾರ ತತ್ವದಡಿ ಸ್ಥಾಪಿತಗೊಂಡಿರುವ ತಾಲ್ಲೂಕಿನ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆ ಮತ್ತು ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಬೆಳವಣಿಗೆಯಲ್ಲಿ ಬದಲಾವಣೆ ಗಾಳಿ ಬೀಸಲಿಕ್ಕೆ ಪ್ರಾರಂಭಿಸಿದೆ ಎಂದು ಹೇಳಿದರು.
ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ಹಿರಾ ಶುಗರ್ಸ್ ಮತ್ತು ವಿದ್ಯುತ್ ಸಂಘದ ಆಡಳಿತ ಮಂಡಳಿ ಕಪಿಮುಷ್ಟಿಯಿಂದ ಇದೀಗ ಹೊರಬಂದಿದ್ದು, ನಿರ್ದೇಶಕರು ಎಚ್ಚರದಿಂದ ಇರಬೇಕು. ತಾಲ್ಲೂಕಿನ ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದರು.
ಉದ್ಘಾಟನೆ: ಇದೇ ಸಂದರ್ಭದಲ್ಲಿ ಸಂಘದ ಆವರಣದಲ್ಲಿ ನಿರ್ಮಿತ ಸ್ಟೋರ್ ಬಿಲ್ಡಿಂಗ್ ಕಟ್ಟಡ ಉದ್ಘಾಟಿಸಲಾಯಿತು. ನಿಡಸೋಸಿ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಮಾಜಿ ಸಚಿವ ಶಶಿಕಾಂತ ನಾಯಿಕ, ಸಂಗಮ ಶುಗರ್ಸ್ ಅಧ್ಯಕ್ಷ ರಾಜೇಂದ್ರ ಪಾಟೀಲ, ಹಿರಾ ಶುಗರ್ಸ್ ಉಪಾಧ್ಯಕ್ಷ ಅಶೋಕ ಪಟ್ಟಣಶೆಟ್ಟಿ, ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಂಘದ ಅಧ್ಯಕ್ಷ ಜಯಗೌಡ ಪಾಟೀಲ, ಉಪಾಧ್ಯಕ್ಷ ವಿಷ್ಣು ರೇಡೇಕರ್, ನಿರ್ದೇಶಕರಾದ ಶಶಿರಾಜ ಪಾಟೀಲ, ಬಸಗೌಡ ಮಗೆನ್ನವರ, ರವಿ ಹಿಡಕಲ್, ಸಂಘದ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಪಾಟೀಲ, ಆರ್.ಇ. ನೇಮಿನಾಥ ಖೆಮಲಾಪುರೆ, ಗುರು ಪಾಟೀಲ, ದುರದುಂಡಿ ನಾಯಕ, ರಿಷಬ್ ಪಾಟೀಲ, ಮೌನೇಶ್ ಪೋತದಾರ ಇದ್ದರು. ಆರ್.ಇ.ನೇಮಿನಾಥ ಖೆಮಲಾಪುರೆ ಸ್ವಾಗತಿಸಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.