ADVERTISEMENT

ಅರ್ಚಕ ಶಾಂತಯ್ಯ ಹಿರೇಮಠಗೆ ‘ವೈದಿಕ ಶಿರೋಮಣಿ ರಾಷ್ಟ್ರೀಯ ಪ್ರಶಸ್ತಿ’

​ಪ್ರಜಾವಾಣಿ ವಾರ್ತೆ
Published 17 ಜುಲೈ 2023, 12:13 IST
Last Updated 17 ಜುಲೈ 2023, 12:13 IST
ಶಾಂತಯ್ಯ ಹಿರೇಮಠ
ಶಾಂತಯ್ಯ ಹಿರೇಮಠ   

ಹುಕ್ಕೇರಿ: ಪಟ್ಟಣದ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ವಸತಿ ಆವರಣದಲ್ಲಿನ ಗಜಾನನ ದೇವಸ್ಥಾನದ ಅರ್ಚಕ ಶಾಂತಯ್ಯ ಶಂಕರಯ್ಯ ಹಿರೇಮಠ ಅವರು ‘ವೈದಿಕ ಶಿರೋಮಣಿ ರಾಷ್ಟ್ರೀಯ ಪ್ರಶಸ್ತಿಗೆ’ ಭಾಜನರಾಗಿದ್ದಾರೆ.

ಬೆಂಗಳೂರಿನಲ್ಲಿ ಇತ್ತೀಚಿಗೆ ನಡೆದ ರಾಷ್ಟ್ರ ಮಟ್ಟದ ಅರ್ಚಕ– ಪುರೋಹಿತರ ಕಾರ್ಯಾಗಾರದಲ್ಲಿ ವೈದಿಕ ಚಾರಟೇಬಲ್ ಟ್ರಸ್ಟ್ ಮಹಾಲಕ್ಷ್ಮೀ ಗುರುಕುಲ ವತಿಯಿಂದ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವೇದ, ಸಂಸ್ಕೃತಿ ಹಾಗೂ ಜ್ಯೋತಿಷ್ಯದಲ್ಲಿ ಸಾಧನೆ ಮಾಡಿ ವೈದಿಕ ಪರಂಪರೆ ಉಳಿವಿಗಾಗಿ  ಶ್ರಮಿಸುತ್ತಿರುವ ಹಿನ್ನಲೆನಲ್ಲಿ ಶಾಂತಯ್ಯ ಅವರಿಗೆ ಈ ಪ್ರಶಸ್ತಿ ನೀಡಿಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.