ADVERTISEMENT

ಕ್ಷೇತ್ರಕ್ಕೆ ಮತ್ತಷ್ಟು ಅನುದಾನ: ಲಕ್ಷ್ಮಿ

​ಪ್ರಜಾವಾಣಿ ವಾರ್ತೆ
Published 23 ಜನವರಿ 2022, 11:35 IST
Last Updated 23 ಜನವರಿ 2022, 11:35 IST
ಬೆಳಗಾವಿ ತಾಲ್ಲೂಕು ಹಿಂಡಲಗಾ ಮಾಸ್ತಿನಗರ ಕಾಲೊನಿಯಲ್ಲಿ ಎಸ್.ಸಿ.ಪಿ. ಅನುದಾನದಲ್ಲಿ ನಿರ್ಮಿಸಿದ ಕಾಂಕ್ರೀಟ್ ರಸ್ತೆ ಹಾಗೂ ಚರಂಡಿಯನ್ನು ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಭಾನುವಾರ ಉದ್ಘಾಟಿಸಿದರು
ಬೆಳಗಾವಿ ತಾಲ್ಲೂಕು ಹಿಂಡಲಗಾ ಮಾಸ್ತಿನಗರ ಕಾಲೊನಿಯಲ್ಲಿ ಎಸ್.ಸಿ.ಪಿ. ಅನುದಾನದಲ್ಲಿ ನಿರ್ಮಿಸಿದ ಕಾಂಕ್ರೀಟ್ ರಸ್ತೆ ಹಾಗೂ ಚರಂಡಿಯನ್ನು ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಭಾನುವಾರ ಉದ್ಘಾಟಿಸಿದರು   

ಬೆಳಗಾವಿ: ‘ಗ್ರಾಮೀಣ ಕ್ಷೇತ್ರಕ್ಕೆ ವಿವಿಧ ಇಲಾಖೆಗಳಿಂದ ಇನ್ನಷ್ಟು ಯೋಜನೆಗಳು ಮಂಜೂರಾಗಿವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿ ಪರ್ವ ನಡೆಯಲಿದೆ’ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ ತಿಳಿಸಿದರು.

ಕ್ಷೇತ್ರದ ಹಿಂಡಲಗಾ ಮಾಸ್ತಿನಗರ ಕಾಲೊನಿಯಲ್ಲಿ ಎಸ್.ಸಿ.ಪಿ. ಅನುದಾನದಲ್ಲಿ ₹ 20 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡ ಕಾಂಕ್ರೀಟ್ ರಸ್ತೆ ಹಾಗೂ ಚರಂಡಿಯನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ನಾನು ಶಾಸಕಿಯಾದ ನಂತರ ಯಾವ ಯಾವ ಇಲಾಖೆಯಿಂದ ಸಾಧ್ಯವೋ ಅಲ್ಲೆಲ್ಲಾ ಹಣ ತಂದಿದ್ದೇನೆ. ನನಗೆ ಕ್ಷೇತ್ರದ ಅಭಿವೃದ್ಧಿ ಮತ್ತು ಜನರ ಯೋಗಕ್ಷೇಮ ನೋಡುವುದನ್ನು ಬಿಟ್ಟು ಬೇರೇನೂ ಕೆಲಸ ಇಲ್ಲ. ಇದರಲ್ಲೇ ತೊಡಗಿಕೊಂಡಿದ್ದೇನೆ’ ಎಂದರು.

ADVERTISEMENT

ನಿವಾಸಿಗಳು, ಎಪಿಎಂಸಿ ಅಧ್ಯಕ್ಷ ಯುವರಾಜ ಕದಂ, ರಾಮಚಂದ್ರ ಕುರೇಮನಿಕರ, ಹೇಮಂತ ಹಿತ್ತಲಮನಿ, ಅಶೋಕ ಕಾಂಬಳೆ, ರಾಹುಲ್ ಉರನಕರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.