ADVERTISEMENT

ಮದ್ಯ ಅಕ್ರಮ ಸಾಗಾಟ: ಬಂಧನ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2025, 14:03 IST
Last Updated 18 ಮಾರ್ಚ್ 2025, 14:03 IST
ಹುಕ್ಕೇರಿ ತಾಲ್ಲೂಕಿನ ಕರಗುಪ್ಪಿ ಬಳಿ ಅಬಕಾರಿ ಇಲಾಖಾಧಿಕಾರಿಗಳು ಆರೋಪಿ ಸಹಿತ 30 ಲೀಟರ್ ಅಕ್ರಮ ಸಾರಾಯಿ ಮಂಗಳವಾರ ವಶಪಡಿಸಿಕೊಂಡರು.
ಹುಕ್ಕೇರಿ ತಾಲ್ಲೂಕಿನ ಕರಗುಪ್ಪಿ ಬಳಿ ಅಬಕಾರಿ ಇಲಾಖಾಧಿಕಾರಿಗಳು ಆರೋಪಿ ಸಹಿತ 30 ಲೀಟರ್ ಅಕ್ರಮ ಸಾರಾಯಿ ಮಂಗಳವಾರ ವಶಪಡಿಸಿಕೊಂಡರು.   

ಹುಕ್ಕೇರಿ: ತಾಲ್ಲೂಕಿನ ಕರಗುಪ್ಪಿ ಗ್ರಾಮದ ಹತ್ತಿರ ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 30 ಲೀಟರ್ ಕಳ್ಳ ಭಟ್ಟಿ ಮದ್ಯ ಹಾಗೂ ಸಾಗಟಕ್ಕೆ ಬಳಸಿದ್ದ ದ್ವಿಚಕ್ರ ವಾಹನವನ್ನು ಅಬಕಾರಿ ಇಲಾಖೆ ಸಿಬ್ಬಂದಿ ಮಂಗಳವಾರ ಜಪ್ತಿಪಡಿಸಿಕೊಂಡು, ವ್ಯಕ್ತಿಯನ್ನು ಬಂಧಿಸಲಾಗಿದೆ.

ತಾಲ್ಲೂಕಿನ ಬಸ್ಸಾಪೂರ ಗ್ರಾಮದಿಂದ ಮೋಟರ್ ಟ್ಯೂಬ್‌ನಲ್ಲಿ ಸಾಗಿಸಲಾಗುತ್ತಿತ್ತು. ಗೋಕಾಕ ತಾಲ್ಲೂಕಿನ ನೆಲಗಂಟೆ ಗ್ರಾಮದ ಬಸವರಾಜ ತಳವಾರ ಬಂಧಿತ. ₹28 ಸಾವಿರ ಮೌಲ್ಯದ ಮದ್ಯ ಜಪ್ತಿಪಡಿಸಲಾಗಿದೆ.

ಕಾರ್ಯಾಚರಣೆಯಲ್ಲಿ ನಿರೀಕ್ಷಕ ವಿಜಯಕುಮಾರ ಮೇಳವಂಕಿ, ಉಪನಿರೀಕ್ಷಕ ತೋರಪ್ಪ ಗಾರಡೆ, ಸಿಬ್ಬಂದಿ ಬಸಪ್ಪ ಉರಬಿನಟ್ಟಿ, ಮಂಜುನಾಥ ನೇಸರಗಿ, ಬಸನಗೌಡ ಪಾಟೀಲ, ಕಾಡೇಶಿ ಗಡದ, ಶಶಿಕಾಂತ ಉರಬಿನಟ್ಟಿ, ರಾಜು ಅಂಬಾರಿ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.