ADVERTISEMENT

ಗೋಕಾಕ: ಬೋರಗಾಂವ ಸಹಕಾರಿ ಸಂಘದ 42ನೇ ಶಾಖೆಯ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 10 ಮೇ 2025, 13:11 IST
Last Updated 10 ಮೇ 2025, 13:11 IST
ಗೋಕಾಕದಲ್ಲಿ ಆರಂಭವಾದ ಬೋರಗಾಂವ ಅರ್ಬನ್ ಕೊ-ಆಪ್ ಕ್ರೆಡಿಟ್ ಸೊಸೈಟಿಯ 42ನೇ ಶಾಖೆಯನ್ನು  ಕಾಂಗ್ರೆಸ್ ಮುಖಂಡ ಹಿರಿಯ ಸಹಕಾರಿ ಅಶೋಕ ಪೂಜಾರಿ ಉದ್ಘಾಟಿಸಿದರು
ಗೋಕಾಕದಲ್ಲಿ ಆರಂಭವಾದ ಬೋರಗಾಂವ ಅರ್ಬನ್ ಕೊ-ಆಪ್ ಕ್ರೆಡಿಟ್ ಸೊಸೈಟಿಯ 42ನೇ ಶಾಖೆಯನ್ನು  ಕಾಂಗ್ರೆಸ್ ಮುಖಂಡ ಹಿರಿಯ ಸಹಕಾರಿ ಅಶೋಕ ಪೂಜಾರಿ ಉದ್ಘಾಟಿಸಿದರು   

ಗೋಕಾಕ: ‘ಸಹಕಾರಿ ಸಂಸ್ಥೆಯ ಶ್ರೇಯಸ್ಸು ಸಂಸ್ಥೆಯ ಆಡಳಿತ ಮಂಡಳಿಯ ಒಗ್ಗಟ್ಟನ್ನು ಅವಲಂಭಿಸಿದ್ದು, ತನ್ನ 42ನೇ ಶಾಖೆಯನ್ನು ಇಲ್ಲಿ ಆರಂಭಿಸಿರುವ ಬೋರಗಾಂವ ಅರ್ಬನ್‌ ಕೊ-ಆಪ್‌ ಕ್ರೆಡಿಟ್‌ ಸೊಸೈಟಿಯ ಆಡಳಿತ ಮಂಡಳಿಯು ಗೋಕಾಕ ಮತ್ತು ಸುತ್ತಮುತ್ತಲಿನ ಜನರ ಸೇವೆಗೆ ಮುಂದಾಗಿರುವುದು ಸ್ವಾಗತಾರ್ಹ’ ಎಂದು ಕಾಂಗ್ರೆಸ್‌ ಮುಖಂಡ ಹಿರಿಯ ಸಹಕಾರಿ ಅಶೋಕ ಪೂಜಾರಿ ಹೇಳಿದರು.

ಶನಿವಾರ ಇಲ್ಲಿನ ರವಿವಾರ ಪೇಟೆಯ ರಾಠೋಡ ಕಟ್ಟಡದಲ್ಲಿ ನೂತನವಾಗಿ ಆರಂಭವಾದ ಬೋರಗಾಂವ ಅರ್ಬನ್‌ ಕೊ-ಆಪ್‌ ಕ್ರೆಡಿಟ್‌ ಸೊಸೈಟಿಯ 42ನೇ ಶಾಖೆ  ಉದ್ಘಾಟಿಸಿ ಮಾತನಾಡಿದ ಅವರು, ಸಾರ್ವಜನಿಕರು ನೂತನ ಸಹಕಾರಿಯ ಸದ್ಭಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.

ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ತಾತ್ಯಾಸೋ ರಾಜಗೊಂಡಾ ಪಾಟೀಲ ಮಾತನಾಡಿ, ‘ನೂತನ ಶಾಖೆಯಿಂದ ಸಾರ್ವಜನಿಕರು, ಗ್ರಾಹಕರಿಗೆ ನೆಟ್‌ ಬ್ಯಾಂಕಿಂಗ್‌ ಸೇವೆಯಲ್ಲದೇ ವ್ಯಾಪಾರ-ವಹಿವಾಟು ಸಾಲ, ಬಂಗಾರ ಅಡಮಾನ ಸಾಲ, ನಿವೇಶನ ಖರೀದಿಗೆ ಸಾಲ, ಮನೆ ನಿರ್ಮಾಣಕ್ಕೆ ಸಾಲ, ವಾಹನ ಖರೀದಿಗೆ ಸಾಲ ಹೀಗೆ ಇನ್ನೂ ಅನೇಕ ಬಗೆಯ ಸಾಲ ಸೌಲಭ್ಯ ಮತ್ತು ಠೇವುಗಳ ಮೇಲೆ ಆಕರ್ಷಕ ಬಡ್ಡಿ ನೀಡಲಾಗುತ್ತದೆ’ ಎಂದರು.

ADVERTISEMENT

ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳರದ ನಿರ್ದೇಶಕರಾದ ಸಂಜಯ ಹೊಸಮಠ ಮತ್ತು ತಮ್ಮಣ್ಣಾ ಕೆಂಚರಡ್ಡಿ, ಬಾಳಯ್ಯ ಕಂಬಿ, ಮಹಾಂತೇಶ ಹಿರೇಮಠ ಮೊದಲಾದವರು ಪಾಲ್ಗೊಂಡಿದ್ದರು.

ಸಂಘದ ಕಾರ್ಯನಿರ್ವಾಹಕ ನಿರ್ದೇಶಕ ರೋಹಣ ಪಾರ್ಖೇ, ಶಾಖಾ ಪ್ರಬಂಧಕ ಉದಯಕುಮಾರ ದಾನವಾಡೆ  ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.