ADVERTISEMENT

ಬೆನಕಟ್ಟಿ: ಸ್ವಾತಂತ್ರ್ಯೋತ್ಸವ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2020, 9:12 IST
Last Updated 15 ಆಗಸ್ಟ್ 2020, 9:12 IST
ಬೆನಕಟ್ಟಿಯ ಸರ್ಕಾರಿ ಪ್ರೌಢಶಾಲೆಯಲ್ಲಿ 74ನೇ ಸ್ವಾತಂತ್ರ್ಯೋತ್ಸವವನ್ನು ಶನಿವಾರ ಆಚರಿಸಲಾಯಿತು
ಬೆನಕಟ್ಟಿಯ ಸರ್ಕಾರಿ ಪ್ರೌಢಶಾಲೆಯಲ್ಲಿ 74ನೇ ಸ್ವಾತಂತ್ರ್ಯೋತ್ಸವವನ್ನು ಶನಿವಾರ ಆಚರಿಸಲಾಯಿತು   

ಬೆನಕಟ್ಟಿ: ಗ್ರಾಮದ ವಿವಿಧೆಡೆ ಶನಿವಾರ 74ನೇ ಸ್ವಾತಂತ್ರ್ಯೋತ್ಸವನ್ನು ಸಂಭ್ರಮದಿಂದ ಆಚರಿಸಲಾಯಿತು.

ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್‌ಡಿಎಂಸಿ ಉಪಾಧ್ಯಕ್ಷ ಈರಯ್ಯ ಹಿರೇಮಠ ಧ್ವಜಾರೋಹಣ ನೆರವೇರಿಸಿದರು. ಸದಸ್ಯ ಮಲ್ಲಿಕಾರ್ಜುನ ಮರ್ಚಪ್ಪನ್ನವರ ಹಾಗೂ ಈರತಯ್ಯ ಹಿರೇಮಠ ಗಾಂಧೀಜಿ ಫೋಟೊಗೆ ಪೂಜೆ ಸಲ್ಲಿಸಿದರು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷ ನಾಗಪ್ಪ ರೈನಾಪೂರ ಧ್ವಜಾರೋಹಣ ಮಾಡಿದರು.

ರಾಣಿ ರುದ್ರಮ್ಮ ಮಹಿಳಾ ವಿವಿಧೋದ್ದೇಶಗಳ ಸಹಕಾರಿ ಸಂಘದಲ್ಲಿ ಮುಖಂಡ ಅಶೋಕ ಯರಝರ್ವಿ, ಬೆನಕಟ್ಟಿ ಕುರಿ ಸಂಗೋಪನ ಮತ್ತು ಉಣ್ಣೆ ಉತ್ಪಾದಕ ಸಹಕಾರಿ ಸಂಘದಲ್ಲಿ ಅಧ್ಯಕ್ಷ ಬೀರಪ್ಪ ದೇವರಮನಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಅಧ್ಯಕ್ಷ ಬೀರಪ್ಪ ಕುರಿ ಧ್ವಜಾರೋಹಣ ನೆರವೇರಿಸಿದರು.

ADVERTISEMENT

ತಾಲ್ಲೂಕು ಪಂಚಾಯಿತಿ ಸದಸ್ಯ ರುದ್ರಪ್ಪ ರೇವನ್ನವರ, ಮುಖ್ಯಶಿಕ್ಷಕರಾದ ವಿ.ಸಿ. ಮಡ್ಡಿ, ಆರ್.ಎಸ್. ಪಾಟೀಲ, ಡಾ.ಜಿ.ಎಚ್. ನಾಯ್ಕ, ಪತ್ರೆಪ್ಪ ಜಲಗೇರಿ, ರಾಜು ಗಯ್ಯಾಳಿ, ಪಿ.ಕೆ. ಮರ್ದನ್ನವರ, ಮಾಯಪ್ಪ ಕುರಿ, ಅಶೋಕ ಬೆನಕಟ್ಟಿ, ಮರೆಪ್ಪ ಚೂರಿ, ಮಲ್ಲಿಕಾರ್ಜುನ ಮರ್ಚಪ್ಪನ್ನವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.