ADVERTISEMENT

ಮಕ್ಕಳ ದಾಖಲಾತಿ, ನಿಗಾ ವಹಿಸಿ: ಎಸ್.ಬಿ. ಹನ್ಸಿ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2021, 13:30 IST
Last Updated 6 ಆಗಸ್ಟ್ 2021, 13:30 IST
ಎಸ್.ಬಿ. ಹನ್ಸಿ
ಎಸ್.ಬಿ. ಹನ್ಸಿ   

ಮುಗಳಖೋಡ: ‘5 ವರ್ಷ 5 ತಿಂಗಳು ಪೂರ್ಣಗೊಂಡಿರುವ ಮಕ್ಕಳನ್ನು 1ನೇ ತರಗತಿಗೆ ದಾಖಲು ಮಾಡಿಸಲು ಪಾಲಕರು ನಿಗಾ ವಹಿಸಬೇಕು’ ಎಂದು ಇಲ್ಲಿನ ಸಿಆರ್‌ಪಿ ಎಸ್.ಬಿ. ಹನ್ಸಿ ಹೇಳಿದರು.

ಪುರಸಭೆಯ ಸಭಾಭವನದಲ್ಲಿ ಮಕ್ಕಳ ಶಾಲಾ ದಾಖಲಾತಿಯ ಕುರಿತು ಶುಕ್ರವಾರ ನಡೆದ ಅಂಗನವಾಡಿ ಕಾರ್ಯಕರ್ತೆಯರೊಂದಿಗೆ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.

‘ಕೋವಿಡ್‌ನಿಂದ ಶಾಲೆಗಳು ಹಾಗೂ ಅಂಗನವಾಡಿ ಕೇಂದ್ರಗಳು ಆಗಿವೆ. 1ನೇ ತರಗತಿಗೆ ದಾಖಲಾತಿ ಬಗ್ಗೆ ಪಾಲಕರು ಕೊಂಚ ನಿರಾಸಕ್ತಿ ವಹಿಸಿದ್ದು ಅಲ್ಲಲ್ಲಿ ಕಂಡುಬಂದಿದೆ. ಈ ನಿಟ್ಟಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಜಾಗೃತಿ ಮೂಡಿಸುತ್ತಿದ್ದಾರೆ. ದಾಖಲಾತಿಯನ್ನೂ ಮಾಡುತ್ತಿದ್ದಾರೆ. ಶೇ 3ರಷ್ಟು ಮಕ್ಕಳ ದಾಖಲಾತಿ ಮಾತ್ರ ಬಾಕಿ ಇದೆ. ಆಗಸ್ಟ್ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.