ADVERTISEMENT

‘ನಮ್ಮನ್ನು ನಾವು ಅರಿಯಬೇಕು’

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2019, 15:03 IST
Last Updated 15 ಸೆಪ್ಟೆಂಬರ್ 2019, 15:03 IST
ಅಥಣಿ ತಾಲ್ಲೂಕಿನ ಬಾಡಗಿ ಗ್ರಾಮದಲ್ಲಿ ಚನ್ನಸಂಗಮೇಶ್ವರ ಜಾತ್ರಾ ಮಹೋತ್ಸವ ಹಾಗೂ ರಥೋತ್ಸವ ಕಾರ್ಯಕ್ರಮದಲ್ಲಿ ಪತ್ರಕರ್ತ ಆರ್.ಎಸ್. ಹೊನಗೌಡ, ಶಿಕ್ಷಕ ಗುರುಶಾಂತಯ್ಯ ಹಿರೇಮಠ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು
ಅಥಣಿ ತಾಲ್ಲೂಕಿನ ಬಾಡಗಿ ಗ್ರಾಮದಲ್ಲಿ ಚನ್ನಸಂಗಮೇಶ್ವರ ಜಾತ್ರಾ ಮಹೋತ್ಸವ ಹಾಗೂ ರಥೋತ್ಸವ ಕಾರ್ಯಕ್ರಮದಲ್ಲಿ ಪತ್ರಕರ್ತ ಆರ್.ಎಸ್. ಹೊನಗೌಡ, ಶಿಕ್ಷಕ ಗುರುಶಾಂತಯ್ಯ ಹಿರೇಮಠ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು   

ಅಥಣಿ: ‘ನಮ್ಮ ಅಂತರಂಗದಲ್ಲಿ ದೇವರಿದ್ದಾನೆ. ಹೀಗಾಗಿ, ನಾವು ದೇವರನ್ನು ಹುಡುಕುವ ಪ್ರಯತ್ನ ಮಾಡಬಾರದು. ಮೊದಲು ನಮ್ಮನ್ನು ನಾವು ಅರಿತುಕೊಳ್ಳಬೇಕು’ ಎಂದು ಹಿಪ್ಪರಗಿ ಸಂಗಮೇಶ್ವರ ಮಠದ ಪ್ರಭೂಜಿ ಮಹಾರಾಜ ಹೇಳಿದರು.

ತಾಲ್ಲೂಕಿನ ಬಾಡಗಿ ಗ್ರಾಮದಲ್ಲಿ ಚನ್ನಸಂಗಮೇಶ್ವರ ಮಹಾರಾಜರ ಜಾತ್ರಾ ಮಹೋತ್ಸವ, ಸುವಿಚಾರ ಹಾಗೂ ರಥೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬಿದ್ದು ಹೋಗುವ ಶರೀರ ನಮ್ಮದು. ಹೀಗಾಗಿ, ಮಾಡುವ ಕೆಲಸದಿಂದ ಸಾರ್ಥಕತೆ ಕಾಣಬೇಕು. ನಾನು, ನನ್ನದು ಎನ್ನುವುದನ್ನು ಮರೆತು ಎಲ್ಲರೊಂದಿಗೂ ಬೆರೆಯಬೇಕು’ ಎಂದರು.

ADVERTISEMENT

ಬಿಜೆಪಿ ಯುವ ಮೋರ್ಚಾ ಚಿಕ್ಕೋಡಿ ಜಿಲ್ಲಾ ಘಟಕದ ಅಧ್ಯಕ್ಷ ಚಿದಾನಂದ ಸವದಿ ಮಾತನಾಡಿದರು. ಪತ್ರಕರ್ತ ಆರ್.ಎಸ್. ಹೊನಗೌಡ, ಶಿಕ್ಷಕ ಗುರುಶಾಂತಯ್ಯ ಹಿರೇಮಠ ಅವರಿಗೆ ಪ್ರಶಸ್ತಿ ‍ಪ್ರದಾನ ಮಾಡಲಾಯಿತು.

ಬಾಡಗಿಯ ಸಿದ್ಧಲಿಂಗೇಶ್ವರ ಸಾದು ಮಹಾರಾಜ, ಶೂರ್ಪಾಲಿ ಗಿರಿಮಲ್ಲೇಶ ಮಹಾರಾಜ, ಹಿಪ್ಪರಗಿ ಸಿದ್ಧಾರೂಢ ಶರಣ, ಗುರುಪಾದ ಶರಣ, ಸಂಗಯ್ಯ ಸ್ವಾಮೀಜಿ ಮಾತನಾಡಿದರು. ಜಿಲ್ಲಾ ಪಂಚಾಯ್ತಿ ಸದಸ್ಯ ಗುರಪ್ಪ ದಾಸ್ಯಾಳ, ತಾಲ್ಲೂಕು ಪಂಚಾಯ್ತಿ ಸದಸ್ಯ ಶ್ರೀಶೈಲ ಶೆಲ್ಲೆಪ್ಪಗೊಳ, ಎಪಿಎಂಸಿ ಅಧ್ಯಕ್ಷ ಯಂಕಪ್ಪ ಅಸ್ಕಿ, ಮುಖಂಡರಾದ ಯಲ್ಲಪ್ಪ ಪಡಸಲಗಿ, ಶಿವಪ್ಪ ಹಟ್ಟಿ, ಸಿ.ಎಸ್. ನ್ಯಾಮಗೌಡ, ಎಸ್.ಗೌಡಪ್ಪನವರ, ಪ್ರಶಾಂತ ಅಕ್ಕೊಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.