ADVERTISEMENT

ಕಾಗವಾಡ: ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಬೇಡ: ರಾಜು ಕಾಗೆ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2025, 5:44 IST
Last Updated 30 ಆಗಸ್ಟ್ 2025, 5:44 IST
ಕಾಗವಾಡ ತಾಲ್ಲೂಕಿನ ಶೇಡಬಾಳ ಪಟ್ಟಣದಲ್ಲಿ ಅಮೃತ 2 ಯೋಜನೆಯಡಿ ಕುಡಿಯುವ ನೀರಿನ ಕಾಮಗಾರಿಗೆ ಶಾಸಕ ರಾಜು ಕಾಗೆ ಹಾಗೂ ಸಂಸದೆ ಪ್ರೀಯಾಂಕ ಜಾರಕಿಹೊಳಿ ಚಾಲನೆ ನೀಡಿದರು.
ಕಾಗವಾಡ ತಾಲ್ಲೂಕಿನ ಶೇಡಬಾಳ ಪಟ್ಟಣದಲ್ಲಿ ಅಮೃತ 2 ಯೋಜನೆಯಡಿ ಕುಡಿಯುವ ನೀರಿನ ಕಾಮಗಾರಿಗೆ ಶಾಸಕ ರಾಜು ಕಾಗೆ ಹಾಗೂ ಸಂಸದೆ ಪ್ರೀಯಾಂಕ ಜಾರಕಿಹೊಳಿ ಚಾಲನೆ ನೀಡಿದರು.   

ಕಾಗವಾಡ: ಅಭಿವೃದ್ಧಿ ಕಾಮಗಾರಿ ವಿಷಯದಲ್ಲಿ ರಾಜಕೀಯ ಮಾಡದೇ ಎಲ್ಲರೂ ಒಗ್ಗಟ್ಟಿನಿಂದ ಪಟ್ಟಣದ ಸುಧಾರಣೆಗೆ ಶ್ರಮ ವಹಿಸಿದಾಗ ಮಾತ್ರ ಗ್ರಾಮ ಮತ್ತು ಪಟ್ಟಣಗಳು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಶಾಸಕ ರಾಜು ಕಾಗೆ ಹೇಳಿದರು.

ಶುಕ್ರವಾರ ತಾಲೂಕಿನ ಶೇಡಬಾಳ ಪಟ್ಟಣದಲ್ಲಿ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ಮಂಜೂರಾದ ₹43.67 ಕೋಟಿ ಅನುದಾನದ ಅಮೃತ 2 ಯೋಜನೆ ಅಡಿಯ ಕಾಗವಾಡ, ಶೇಡಬಾಳ, ಉಗಾರ ಖುರ್ದ ಪಟ್ಟಣಗಳಿಗೆ ಕುಡಿಯುವ ನೀರು ಸರಬರಾಜು ಯೋಜನೆಯ ಎರಡನೇ ಹಂತದ ಕಾಮಗಾರಿಗೆ ಹಾಗೂ ವಿಠ್ಠಲ ರುಕ್ಮಿಣಿ ಮಂದಿರ ಮತ್ತು ಮುಸ್ಲಿಂ ಸಮುದಾಯ ಭವನದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ ಚುನಾವಣೆ ಸಮಯದಲ್ಲಿ ಮಾತ್ರ ರಾಜಕೀಯ ಮಾಡಿ ಉಳಿದ ಸಮಯದಲ್ಲಿ ಪ್ರತಿ ಒಬ್ಬರು ಗ್ರಾಮಗಳ ಅಭಿವೃದ್ಧಿ ಸಹಕಾರ ನೀಡಿ ಗುಣಮಟ್ಟದ ಕಾಮಗಾರಿ ಆಗುವಂತೆ ನಿಗಾ ವಹಿಸಬೇಕು ಈ ಅಮೃತ ಯೋಜನೆಯಿಂದ ಮೂರು ಪಟ್ಟಣಗಳ ನಾಗರಿಕರಿಗೆ ಶುದ್ದ ಕುಡಿಯುವ ನೀರು ಪೂರೈಕೆ ಆಗಲಿವೆ ಎಂದು ಹೇಳಿದರು.

ಸಂಸದೆ ಪ್ರಿಯಾಂಕ ಜಾರಕಿಹೊಳಿ ಮಾತನಾಡಿ, ಶಾಸಕ ರಾಜು ಕಾಗೆ ಅವರು ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅನುದಾನ ತಂದು, ಕ್ಷೇತ್ರದ ಸರ್ವಾಂಗಿನ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿದ್ದು ನಾನು ಕೂಡ ಅವರೊಂದಿಗೆ ತಮ್ಮ ಬೇಡಿಕೆ ಅನುಗುಣವಾಗಿ ಸಂಸದರ ನಿಧಿಯಿಂದ ಮಂಜೂರಾತಿ ನೀಡಿ ಎಲ್ಲ ಬೇಡಿಕೆಗಳನ್ನು ಶಾಸಕರ ಸಹಕಾರ ದೊಂದಿಗೆ ಈಡೇರಿಸುವ ಭರವಸೆ ನೀಡಿದರು.

ADVERTISEMENT

ಪಟ್ಟಣ ಪಂಚಾಯಿತಿ ಅಧ್ಯಕ್ಷ ಉತ್ಕರ್ಷ ಪಾಟೀಲ, ಉಪಾಧ್ಯಕ್ಷೆ ದೀಪ ಹೊನಕಾಂಬಳೆ ಎಇಇ ಉಮೇಶ ಆರ್ ಕೆ, ಅಜಿತ ಚೌಗಲೆ,ಗುತ್ತಿಗೆದಾರ ಸತ್ಯಜೀತ ನಲವಡೆ,ಸಾಗರ ಮಗದುಮ್ಮ,ಜ್ಯೋತಿಬಾ ಚಹ್ವಾಣ,ಮುಖ್ಯಾಧಿಕಾರಿ ಸುರೇಶ ಪತ್ತಾರ, ಕೆ ಕೆ ಗಾವಡೆ, ಮುಖಂಡರಾದ ವಿನೋದ ಬರಗಾಲೆ,ಜೋತಿಕುಮಾರ ಪಾಟೀಲ, ಸೌರಭ ಪಾಟೀಲ, ಕಾಕಾ ಪಾಟೀಲ, ರಮೇಶ ರತ್ನಪ್ಪಗೋಳ, ಪ್ರಕಾಶ ಮಾಳಿ,ರಾಮು ನರಸಾಯಿ, ಬಾಬು ಐನಾಪುರೆ, ಭರತ ನಾಂದ್ರೆ, ಪ್ರತಾಪ ಜಾತ್ರಾಟೆ,ಸೇರಿದಂತೆ ಅನೇಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.