ADVERTISEMENT

ಕರಾಳ ದಿನಾಚರಣೆಗೆ ಅನುಮತಿ ನೀಡದಂತೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2020, 12:57 IST
Last Updated 17 ಅಕ್ಟೋಬರ್ 2020, 12:57 IST
ಎಂಇಎಸ್‌ ಸಂಘಟನೆ ಆಯೋಜಿಸುವ ಕರಾಳ ದಿನಾಚರಣೆಗೆ ಅನುಮತಿ ನೀಡಬಾರದು ಎಂದು ಆಗ್ರಹಿಸಿ ಗೋಕಾಕದ ವಾಲ್ಮೀಕಿ ವೃತ್ತದಲ್ಲಿ ಕರವೇ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು
ಎಂಇಎಸ್‌ ಸಂಘಟನೆ ಆಯೋಜಿಸುವ ಕರಾಳ ದಿನಾಚರಣೆಗೆ ಅನುಮತಿ ನೀಡಬಾರದು ಎಂದು ಆಗ್ರಹಿಸಿ ಗೋಕಾಕದ ವಾಲ್ಮೀಕಿ ವೃತ್ತದಲ್ಲಿ ಕರವೇ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು   

ಗೋಕಾಕ: ‘ಎಂಇಎಸ್ ಸಂಘಟನೆ ನ.1ರಂದು ಆಯೋಜಿಸುವ ಕರಾಳ ದಿನಕ್ಕೆ ಅನುಮತಿ ನೀಡಬಾರದು’ ಎಂದು ಒತ್ತಾಯಿಸಿ ಕರವೇ ತಾಲ್ಲೂಕು ಘಟಕದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಇಲ್ಲಿನ ವಾಲ್ಮೀಕಿ ವೃತ್ತದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.

ಎಂಇಎಸ್ ಸಂಘಟನೆಯ ಪ್ರತಿಕೃತಿ ದಹಿಸಿದರು.

ಅಧ್ಯಕ್ಷ ಬಸವರಾಜ ಖಾನಪ್ಪನವರ, ‘ಆ ಸಂಘಟನೆಯು ಕನ್ನಡ ರಾಜ್ಯೋತ್ಸವ ಬಹಿಷ್ಕರಿಸಿ ಕರಾಳ ದಿನಾಚರಣೆ ನಡೆಸುತ್ತದೆ. ನಾಡ ವಿರೋಧಿಯಾದ ಈ ಕ್ರಮಕ್ಕೆ ಅವಕಾಶ ಕೊಡಬಾರದು. ಅದನ್ನು ನಿಷೇಧಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಕೃಷ್ಣ ಖಾನಪ್ಪನವರ, ದೀಪಕ ಹಂಜಿ, ಶೆಟ್ಟೆಪ್ಪ ಗಾಡಿವಡ್ಡರ, ಮುಗುಟ ಪೈಲ್ವಾನ್, ಅಶೋಕ ಬಂಡಿವಡ್ಡರ, ನಿಜಾಮ ನಧಾಪ, ರಮೇಶ ಕಮತಿ, ರಾಮ ಕುಡೆಮ್ಮಿ, ಮಂಜುನಾಥ ಪ್ರಭುನಟ್ಟಿ, ಯಲ್ಲಪ್ಪ ಧರ್ಮಟ್ಟಿ, ಶಂಕರಲಿಂಗ ಗಾಡಿವಡ್ಡರ, ಮಾರುತಿ ಗಾಡಿವಡ್ಡರ, ಶಂಕರ ಗಾಡಿವಡ್ಡರ, ರಾಜೇಂದ್ರ ಕೆಂಚನಗುಡ್ಡ, ಮಹಾಂತೇಶ ಹಿರೇಮಠ, ಸತ್ತಾರ ಬೇಪಾರಿ, ವಿಠ್ಠಲ ಹಂಜಿ, ಪ್ರತೀಕ ಪಾಟೀಲ, ಸಂತೋಷ ಕೋಲಕಾರ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.