ADVERTISEMENT

ಸವದಿ ಎಂಬ ಪೀಡೆ ತೊಲಗಿತು: ರಮೇಶ ಜಾರಕಿಹೊಳಿ ಟೀಕೆ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2023, 16:03 IST
Last Updated 14 ಏಪ್ರಿಲ್ 2023, 16:03 IST
ಅಥಣಿಯಲ್ಲಿ ಶುಕ್ರವಾರ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ರಮೇಶ ಜಾರಕಿಹೋಳಿ ಮಾತನಾಡಿದರು
ಅಥಣಿಯಲ್ಲಿ ಶುಕ್ರವಾರ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ರಮೇಶ ಜಾರಕಿಹೋಳಿ ಮಾತನಾಡಿದರು   

ಅಥಣಿ (ಬೆಳಗಾವಿ ಜಿಲ್ಲೆ): ‘ಲಕ್ಷ್ಮಣ ಸವದಿ ಸೋತಿದ್ದರೂ ಪಕ್ಷ ಅವನನ್ನು ಉಪಮುಖ್ಯಮಂತ್ರಿ ಮಾಡಿತ್ತು. ನಿಮ್ಮನ್ನು ಬಿಟ್ಟು ಹೋಗಿದ್ದಾನೆ. ಪೀಡೆ ತೊಲಗಿತು’ ಎಂದು ಎಂದು ಶಾಸಕ ರಮೇಶ ಜಾರಕಿಹೊಳಿ ಟೀಕಿಸಿದರು.

ಪಟ್ಟಣದಲ್ಲಿ ಶುಕ್ರವಾರ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ‘ನನಗೆ ಮಂತ್ರಿ ಸ್ಥಾನ ತಪ್ಪಿದ ಮೇಲೆ ನಾಆನ ಕಾಂಗ್ರೆಸ್‌ಗೆ ಹೋಗುತ್ತೇನೆ ಎಂಬ ಭ್ರಮೆ ಸವದಿಯಲ್ಲಿತ್ತು. ಆದರೆ, ನಾನು ಹೋಗಲಿಲ್ಲ. ಮಂತ್ರಿ ಮಾಡಿದರೂ ಅವರು ಹೊರಹೋದ. ಒಳ್ಳೆಯದೇ ಆಯಿತು’ ಎಂದರು.

‘ಒಂದೂವರೆ ವರ್ಷ ಉಪ ಮುಖ್ಯಮಂತ್ರಿ ಆಗಿದ್ದರೂ ಅಥಣಿ ಅಭಿವೃದ್ಧಿಗೆ ಏನೂ ಮಾಡ್ಲಿಲ್ಲ. ಡಿಕೆಶಿ ಇವನನ್ನು ವಿಶೇಷ ವಿಮಾನದಲ್ಲಿ ಕರೆದುಕೊಂಡು ಹೋಗಿದ್ದಾನೆ. ಡಿಕೆಶಿ ಬಹಳ ಕುತಂತ್ರಿ. ಇಂಥವರಿಂದ ಬಚಾವಾಗಲು ನೀವು ನನಗೆ ಶಕ್ತಿ ಕೊಡಬೇಕು. ಮಹೇಶ ಕುಮಠಳ್ಳಿ ಅವರನ್ನು ಗೆಲ್ಲಿಸಬೇಕು’ ಎಂದರು.

‘ಅಥಣಿಯಲ್ಲಿ ಬಿಜೆಪಿ ಗೆಲ್ಲಿಸುವುದೇ ಗುರಿ’
ಅಥಣಿ:
‘ಇಷ್ಟು ವರ್ಷ ಲಕ್ಷ್ಮಣ ಸವದಿ ಕ್ಷೇತ್ರದಲ್ಲಿದ್ದಾನೆ ಎಂದು ನಾನು ದೂರ ಇದ್ದೆ. ಆದರೆ, ಇನ್ನುಮುಂದೆ ಕ್ಷೇತ್ರದಲ್ಲೇ ಇರುತ್ತೇನೆ. ನಿಮ್ಮನ್ನು ಬಿಟ್ಟು ಹೋದವನನ್ನು ಕ್ಷಮಿಸಬೇಡಿ. ಮಹೇಶ ಕುಮಠಳ್ಳಿ ಅವರನ್ನು ಗೆಲ್ಲಿಸಿ’ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.

ADVERTISEMENT

ಪ‍ಟ್ಟಣದಲ್ಲಿ ಶುಕ್ರವಾರ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ‘ತಾಲ್ಲೂಕಿನ ಕೆಲವು ಸಹಕಾರಿ ಸಂಸ್ಥೆಯಲ್ಲಿ ಅಕ್ರಮವಾಗಿದೆ. ನಾವು ಅಧಿಕಾರಕ್ಕೆ ಬಂದರೆ ಆ ಅಕ್ರಮಗಳನ್ನು ಪರಿಶೀಲನೆ ಮಾಡುತ್ತೇವೆ. ಕಳೆದ ಉಪಚುನಾವಣೆ ಸಮಯದಲ್ಲಿ ನಾಟಕ ಮಾಡಿದ್ದಾನೆ. ಆದರೆ, ಈ ಬಾರಿ ಏನು ನಡೆಯುವುದಿಲ್ಲ’ ಎಂದರು.

ಶಾಸಕ ಮಹೇಶ ಕುಮಠಳ್ಳಿ ಮಾತನಾಡಿ, ‘2018ರಲ್ಲಿ ಕಾಂಗ್ರೆಸ್‌ನಿಂದ ನನಗೆ ರಮೇಶ ಜಾರಕಿಹೊಳಿ ಅವರ ಸಹಕಾರದಿಂದ ಶಾಸಕನಾಗುವ ಅವಕಾಶ ಸಿಕ್ಕಿತು. ಬಿಜೆಪಿಗೆ ನಾನು ಅಧಿಕಾರಕ್ಕಾಗಿ ಬಂದಿಲ್ಲ, ಅಂದಿನ ರಾಜಕೀಯ ವಿದ್ಯಮಾನಗಳ ವಿರುದ್ಧ ಸಿಡಿದೆದ್ದವರು ರಮೇಶ ಜಾರಕಿಹೊಳಿ. ಅವರು ನನಗೆ ತನು– ಮನ– ಧನದಿಂದ ಸಹಕಾರ ಕೊಟ್ಟಿದ್ದಾರೆ. ರಮೇಶ ಅಣ್ಣ ಅವರ ಮಾತಿಗೆ ಬೆಲೆ ಕೊಟ್ಟು ಬಂದೆ’ ಎಂದರು.

ಮುಖಂಡರಾದ ಉಮೇಶರಾವ ಬೊಂಟೋಡಕರ, ಡಾ.ರವಿ ಸಂಕ, ಸಿದ್ದಪ್ಪ ಮುದಕನ್ನವರ, ಕೆ.ಎಲ್. ಕುಂದರಗಿ, ವೆಂಕಣ್ಣ ಹಳಿಂಗಳಿ, ಅನೀಲರಾವ ದೇಶಪಾಂಡೆ, ಜಿನೇಂದ್ರ ಪಾಟೀಲ, ಮಲ್ಲಿಕಾರ್ಜುನ ಅಂದಾನಿ, ಸಂತೋಷ ಕಕಮರಿ, ಡಾ.ರೋಡಗಿ, ನಾನಸಾಬ್‌ ಅವತಾಡೆ, ಬಾಬಾಸಾಬ್‌ ಪಾಟೀಲ, ಬಸವರಾಜ ಬಿರಾದಾರ, ಬಸಣ್ಣ ಪೂಜಾರಿ, ಪುಟ್ಟು ಹಿರೇಮಠ, ನಿಂಗಪ್ಪ ನಂದೇಶ್ವರ, ಶಶಿ ಸಾಳವೆ, ಅನಿಲ ಸೌದಾಗರ, ಅರ್ಜುನ ಪವಾರ, ಸದಾಶಿವ ಕೊಂಪಿ, ದೀಪಕ ಪಾಟೀಲ ಸೇರಿದಂತೆ ಇತರರು ಇದ್ದರು.

ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.