ADVERTISEMENT

ಬೆಳಗಾವಿ | ರಾಷ್ಟ್ರೀಯ ಕುಂಟಾಟ ಚಾಂಪಿಯನ್‌ಷಿಪ್‌: ರಾಜ್ಯ ತಂಡಕ್ಕೆ ತರಬೇತಿ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2025, 8:04 IST
Last Updated 21 ನವೆಂಬರ್ 2025, 8:04 IST
ರಾಷ್ಟ್ರೀಯ ಕುಂಟಾಟ ಚಾಂಪಿಯನ್‍ಷಿಪ್‍ಗಾಗಿ ಗುಜರಾತ್‍ಗೆ ತೆರಳಿದ ಕರ್ನಾಟಕ ರಾಜ್ಯ ಜೂನಿಯರ್ ಬಾಲಕರ ಮತ್ತು ಬಾಲಕಿಯರ ಕುಂಟಾಟದ ತಂಡಗಳು 
ರಾಷ್ಟ್ರೀಯ ಕುಂಟಾಟ ಚಾಂಪಿಯನ್‍ಷಿಪ್‍ಗಾಗಿ ಗುಜರಾತ್‍ಗೆ ತೆರಳಿದ ಕರ್ನಾಟಕ ರಾಜ್ಯ ಜೂನಿಯರ್ ಬಾಲಕರ ಮತ್ತು ಬಾಲಕಿಯರ ಕುಂಟಾಟದ ತಂಡಗಳು    

ನಿಪ್ಪಾಣಿ: ಕರ್ನಾಟಕ ರಾಜ್ಯ ಜೂನಿಯರ್ ಬಾಲಕರ ಮತ್ತು ಬಾಲಕಿಯರ ಕುಂಟಾಟದ ತಂಡಗಳು ರಾಷ್ಟ್ರೀಯ ಕುಂಟಾಟ ಚಾಂಪಿಯನ್‍ಷಿಪ್‍ಗಾಗಿ ಗುಜರಾತ್‍ಗೆ ತೆರಳಿದವು.

ಕಳೆದ ನಾಲ್ಕು ದಿನಗಳಿಂದ ಭಿರಡಿಯ ಅಬಾಜಿ ಸ್ಪೋರ್ಟ್ಸ್‌ ಕ್ಲಬ್ ಹಾಗೂ ಮುರಸಿದ್ಧೇಶ್ವರ ದೇವಸ್ಥಾನ ಸಮಿತಿ ಸಂಯುಕ್ತ ಆಶ್ರಯದಲ್ಲಿ ಭಿರಡಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಕುಂಟಾಟದ ತರಬೇತಿ ಶಿಬಿರ ಬುಧವಾರ ಕೊನೆಗೊಂಡಿತು.

ರಾಜು ಹಿಪ್ಪರಗಿ, ಗಂಗೋಶಿ ಆಜ್ಜಾ, ಅಮಿತ ತಿಗಡಿ, ಸಚಿನ ನಿಶಾಣದಾರ, ವಿನಾಯಕ ನಿಶಾಣದಾರ, ಬಸವರಾಜ ಖೋತ, ಅಮರ ಕಾಂಬಳೆ, ಮೊದಾದವರು ಈ ತರಬೇತಿ ಶಿಬಿರಕ್ಕೆ ಶ್ರಮಿಸಿದರು. ಅಲ್ಲದೆ, ಕುಮಾರ ಭಾಪಕರ, ಶಾರುಖ ಗವಂಡಿ ಮತ್ತು ರಾಜು ಪಾಟೀಲ ನೇತೃತ್ವದಲ್ಲಿ ಈ ತರಬೇತಿ ಶಿಬಿರವು ಯಶಸ್ವಿಯಾಗಿ ನಡೆಯಿತು.

ADVERTISEMENT

ಬಾಲಕರಲ್ಲಿ ಶಿವರಾಜ ತಾರದಾಳೆ, ದಯಾನಂದ ಯರಗಟ್ಟಿ, ಅಜಿತ ದಳವಾಯಿ, ಕಾರ್ತಿಕ ಶೆಂಡೂರೆ, ಚೇತನ ಗಿರಿಮಲನವರ, ಸಕ್ಷಮ ಮೋಕಾಶಿ, ಶಿವರಾಜ ಭೋಸಲೆ, ಬಸವರಾಜ ಚೌಗುಲೆ, ಅಶೋಕ ಪಾಟೀಲ, ಮಾರುತಿ ದೊಂಬರೆ, ಅಭಿಷೇಕ ಚೌಗುಲೆ, ಅನಿಲ ಢವಳೆ ತಂಡದಲ್ಲಿದ್ದು ತಂಡದ ಮ್ಯಾನೇಜರ್‍ರಾಗಿ ಬೀರೇಶ್ ಕಾಂಬಳೆ ಮತ್ತು ತರಬೇತುದಾರರಾಗಿ ಮಹೇಶ ಮಾಸೆಕರ ಇದ್ದಾರೆ.

ಬಾಲಕಿಯರಲ್ಲಿ ಭಾಗ್ಯಶ್ರೀ ಮೊದೆನವರ, ಸಂಚಿತಾ ಜಬಡೆ, ಜ್ಯೋತಿ ಬಿಲ್ಲವ, ಪ್ರಣಾಲಿ ಚೌಗುಲೆ, ಸುಷ್ಮಾ ಬೋರಗಾವೆ, ಸೃಷ್ಟಿ ವಾಘೆ, ರೋಹಿಣಿ ಭಾನುಸೆ, ತ್ರಿವೇಣಿ ನಿಡವಾಣಿ, ಭಾಗ್ಯಲಕ್ಷ್ಮಿ ಲಗಳಿ, ಯಲ್ಲವ್ವ ಯಡ್ರಾವಿ, ನಂದಿನಿ ಪಾಟೀಲ, ಮೇಘಾ ಕಡಲಗಿ ತಂಡದಲ್ಲಿದ್ದು ತಂಡದ ವ್ಯವಸ್ಥಾಪಕರಾಗಿ ಮಲ್ಲಿಕಾರ್ಜುನ ಚೌಗುಲೆ ಮತ್ತು ತರಬೇತುದಾರರಾಗಿ ಶಾರುಖ ಗವಂಡಿ ಇದ್ದಾರೆ.

ಈ ಸ್ಪರ್ಧೆಗೆ ರಾಷ್ಟ್ರ್ರೀಯ ಕುಂಟಾಟ ಸ್ಪರ್ಧೆಯಲ್ಲಿ ನಮ್ಮ ಭಾಗದ ಪ್ರವೀಣ ನರಗಟ್ಟೆ ತೀರ್ಪುಗಾರರಾಗಿ ಆಯ್ಕೆಯಾಗಿದ್ದಾರೆ ಹಾಗೂ ಎರಡೂ ತಂಡಗಳಿಗೆ ರಾಷ್ಟ್ರೀಯ ಕುಂಟಾಟ ಒಕ್ಕೂಟದ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ಮತ್ತು ರಾಜ್ಯ ಕುಂಟಾಟ ಅಸೋಸಿಯೇಶನ್‍ನ ಅಧ್ಯಕ್ಷೆ ಶಾಸಕಿ ಶಶಿಕಲಾ ಜೊಲ್ಲೆ ಹಾರೈಸಿದ್ದಾರೆ ಎಂದು ರಾಜ್ಯ ಕುಂಟಾಟ ಅಸೋಸಿಯೇಷನ್‍ನ ಪ್ರಧಾನ ಕಾರ್ಯದರ್ಶಿ ಮಾಣಿಕ ಶಿರಗುಪ್ಪೆ ತಿಳಿಸಿದರು.

ಶಿರಗುಪ್ಪೆ ಅವರ ನೇತೃತ್ವದಲ್ಲಿ ತಂಡವು ನ. 21 ರಿಂದ 23ರವರೆಗೆ ಗುಜರಾತ್‍ನ ವಡೋದರಾದಲ್ಲಿ ನಡೆಯಲಿರುವ ರಾಷ್ಟ್ರೀಯ ಕುಂಟಾಟ ಚಾಂಪಿಯನ್‍ಷಿಪ್‍ಗೆ ತೆರಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.