
ಚಿಕ್ಕೋಡಿ: ತಾಲ್ಲೂಕಿನ ಕರಗಾಂವ ಹಾಗೂ ಹನುಮಾನ ಏತನೀರಾವರಿ ಯೋಜನೆಗಳನ್ನು ಕೂಡಲೇ ಜಾರಿಗೆ ಆಗ್ರಹಿಸಿ ಡಿ.4 ರಂದು ಚಿಕ್ಕೋಡಿ ಸಂಪೂರ್ಣ ಬಂದ್ ಗೆ ಕರ್ನಾಟಕ ರಾಜ್ಯ ರೈತ ಸಂಘ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ ಕರೆ ನೀಡಿದರು.
ಪಟ್ಟಣ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗೋಷ್ಢಿಯಲ್ಲಿ ಮಾತನಾಡಿದ ಅವರು, ಕರಗಾಂವ ಹಾಗು ಹನುಮಾನ ಏತನೀರಾವರಿ ಯೋಜನೆಗೊಳಪಡುವ ಗ್ರಾಮಗಳು ಹನಿ ನೀರಿಗೂ ಪರಿತಪಿಸುವ ಪರಿಸ್ಥಿತಿ ಎದುರಿಸಬೇಕಾಗಿದೆ. ಡಿ. 4 ರಂದು ಚಿಕ್ಕೋಡಿ ಪಟ್ಟಣದಲ್ಲಿ ಸಹಸ್ರಾರು ರೈತರು ಒಗ್ಗೂಡಿ ಬಸವೇಶ್ವರ ವೃತ್ತದಲ್ಲಿ ರಸ್ತೆ ತಡೆ ನಡೆಸಲಾಗುವುದು ಎಂದರು.
33 ಗ್ರಾಮಗಳನ್ನು ಒಳಪಡುವ ಈ ಎರಡೂ ನೀರಾವರಿ ಯೋಜನೆ ಜಾರಿಗೊಳಿಸುವುದಾಗಿ ಆಡಳಿದ ಸರ್ಕಾರಗಳು ಪೊಳ್ಳು ಭರವಸೆ ನೀಡುತ್ತ ಬಂದಿವೆ. ಚಿಕ್ಕೋಡಿ ಸದಗಲಾ ಶಾಸಕ ಗಣೇಶ ಹುಕ್ಕೇರಿ, ರಾಯಬಾಗ ಶಾಸಕ ದುರ್ಯೋಧನ ಐಹೊಳೆ ಹಲವು ಬಾರಿ ಯೋಜನೆಗೆ ಕಾಟಾಚಾರದ ಚಾಲನೆ ನೀಡಿದ್ದಾರೆ ಎಂದು ಕಿಡಿಕಾರಿದರು.
ಸುದ್ದಿಗೋಷ್ಢಿಯಲ್ಲಿ ರೈತ ಸಂಘದ ರಾಜ್ಯ ಕಾರ್ಯದರ್ಶಿ ರಾಜು ಪವಾರ, ದುಂಡಪ್ಪಾ ಬೆಂಡವಾಡೆ, ಪ್ರಭು ಡಬ್ಬನ್ನವರ, ಪ್ರಶಾಂತ ಹುಕ್ಕೇರಿ, ಚಂದ್ರಕಾಂತ ಹುಕ್ಕೇರಿ ಮುಂತಾದವರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.