ADVERTISEMENT

ಫೆ.4ರಂದು ಕ್ರಾಂತಿವೀರ ಬ್ರಿಗೇಡ್ ಬೃಹತ್ ಸಮಾವೇಶ: ಈಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 28 ಜನವರಿ 2025, 14:19 IST
Last Updated 28 ಜನವರಿ 2025, 14:19 IST
ಕವಲಗುಡ್ಡ ಗ್ರಾಮದಲ್ಲಿ ಮಂಗಳವಾರ ನಡೆದ ಕ್ರಾಂತಿವೀರ ಬ್ರಿಗ್ರೆಡ್ ಪೂರ್ವಭಾವಿ ಸಭೆಯನ್ನು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ದೀಪ ಬೆಳಗುವ ಮೂಲಕ ಉದ್ಘಾಟಿಸಿದರು
ಕವಲಗುಡ್ಡ ಗ್ರಾಮದಲ್ಲಿ ಮಂಗಳವಾರ ನಡೆದ ಕ್ರಾಂತಿವೀರ ಬ್ರಿಗ್ರೆಡ್ ಪೂರ್ವಭಾವಿ ಸಭೆಯನ್ನು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ದೀಪ ಬೆಳಗುವ ಮೂಲಕ ಉದ್ಘಾಟಿಸಿದರು   

ಕಾಗವಾಡ: ಭಾರತ ದೇಶದಲ್ಲಿ ಸನಾತನ ಹಿಂದೂ ಧರ್ಮ ಉಳಿಸುವ ದಿಕ್ಕಿನಲ್ಲಿ ಹಾಗೂ ಹಿಂದುಳಿದ, ದಲಿತರ, ಸರ್ವ ಹಿಂದೂ ಸಮಾಜಕ್ಕ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸುವುದು ಸೇರಿದಂತೆ ದೇಶದ ಪರಂಪರೆಯನ್ನು ಕ್ರಾಂತಿವೀರ ಬ್ರಿಗೇಡ್‌ ಸಾಧು ಸಂತರ ಮಾರ್ಗದರ್ಶನದಲ್ಲಿ ಉಳಿಸುವ ಕೆಲಸ ಮಾಡಲಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ ಹೇಳಿದರು.

ತಾಲ್ಲೂಕಿನ ಕೌವಲಗುಡ್ಡ ಕರಿಯೋಗಸಿದ್ದಾಶ್ರಮದಲ್ಲಿ ಅಥಣಿ ಹಾಗೂ ಕಾಗವಾಡ ತಾಲೂಕಿನ ಕಾಂತ್ರಿವೀರ ಬ್ರಿಗೇಡ್‌ನ ಕಾರ್ಯಕ್ರಮದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿ ಬರುವ ಫೆ.4 ರಂದು ಬಸವನ ಬಾಗೇವಾಡಿಯಲ್ಲಿ ಜರಗುವ ಕಾರ್ಯಕ್ರಮದಲ್ಲಿ 1008 ವಿವಿಧ ಸ್ವಾಮೀಜಿಗಳ ಪಾದ ಪೂಜೆಯೊಂದಿಗೆ ಕ್ರಾಂತಿವೀರ ಬ್ರಿಗೇಡ್‌ನ ಬೃಹತ್ ಸಮಾವೇಶ ಚಾಲನೆ ನೀಡಲಾಗುವುದು ಕಾರ್ಯಕ್ರಮಕ್ಕೆ ಪಕ್ಷ, ಜಾತಿ ಮರೆತು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.

ಸಾನ್ನಿಧ್ಯ ವಹಿಸಿದ್ದ ಕವಲಗುಡ್ಡ ಸಿದ್ಧಾಶ್ರಮದ ಅಮರೇಶ್ವರ ಸ್ವಾಮೀಜಿ ಮಾತನಾಡಿ, ಕ್ರಾಂತಿವೀರ ಬ್ರಿಗೇಡ್ ಯಾವುದೇ ಜಾತಿ ಪಕ್ಷಗಳಿಗೆ ಸೀಮಿತವಾಗಿಲ್ಲ. ಎಲ್ಲಾ ಧರ್ಮದ ಹಾಗೂ ಪಕ್ಷದವರು ಈ ದೇಶದಲ್ಲಿ ಸನಾತನ ಹಿಂದೂ ಧರ್ಮ ಉಳಿಯಬೇಕಾದರೆ ಬಸವನ ಬಾಗೇವಾಡಿಯಲ್ಲಿ ನಡೆಯುವ ಬೃಹತ್‌ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಬಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದರು.

ADVERTISEMENT

ಬನಸಿದ್ಧ ಮಹಾರಾಜರು, ನಿಪನಾಳದ ಸ್ವಾಮೀಜಿ ಮಾಜಿ ಜಿ.ಪಂ ಸದಸ್ಯ ಸಿದ್ಧಪ್ಪಾ ಮುದಕ್ಕನ್ನವರ, ರಾಜ್ಯಾಧ್ಯಕ್ಷ ಬಸವರಾಜ ಬಾಳಿಕಾಯಿ, ಅಶೋಕ ಲಿಂಬಿಗಿಡದ, ಸಿದರಾಯ ಕಾಳೇಲಿ, ಸದಾಶಿವ ಪೂಜಾರಿ, ಅಪ್ಪಾಸಾಬ ಪಾಟೀಲ, ಬಾಳಪ್ಪ ನರಟ್ಟಿ , ಮಹಾದೇವ ಮಾಳಿ, ದೇವಪ್ಪ ಮಾನಗಾಂವೆ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.