ADVERTISEMENT

‘ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ’

ಕೆಆರ್‌ಐಡಿಎಲ್‌ ಪ್ರಗತಿ ಪರಿಶೀಲನೆ ಸಭೆಯಲ್ಲಿ ರಾಹುಲ್‌ ಶಿಂಧೆ ಸೂಚನೆ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2026, 2:38 IST
Last Updated 1 ಫೆಬ್ರುವರಿ 2026, 2:38 IST
ಬೆಳಗಾವಿಯ ಕೆಆರ್‌ಐಡಿಎಲ್‌ ವಲಯ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಕಾಮಗಾರಿ ಪರಿಶೀಲನೆ ಸಭೆಯಲ್ಲಿ ರಾಹುಲ್‌ ಶಿಂಧೆ ಮತ್ತಿತರರು ಭಾಗವಹಿಸಿದ್ದರು
ಬೆಳಗಾವಿಯ ಕೆಆರ್‌ಐಡಿಎಲ್‌ ವಲಯ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಕಾಮಗಾರಿ ಪರಿಶೀಲನೆ ಸಭೆಯಲ್ಲಿ ರಾಹುಲ್‌ ಶಿಂಧೆ ಮತ್ತಿತರರು ಭಾಗವಹಿಸಿದ್ದರು   

ಬೆಳಗಾವಿ: ‘ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ(ಕೆಆರ್‌ಐಡಿಎಲ್‌) ಕೈಗೆತ್ತಿಕೊಂಡಿರುವ ಎಲ್ಲ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಸೂಚಿಸಿದರು.

ಇಲ್ಲಿನ ಕೆಆರ್‌ಐಡಿಎಲ್‌ ವಲಯ ಕಚೇರಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾಮಗಾರಿಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಪ್ರಗತಿಯಲ್ಲಿರುವ ಎಲ್ಲ ಕಾಮಗಾರಿಗಳನ್ನು ನಿಯಮಾನುಸಾರ ಪೂರ್ಣಗೊಳಿಸಿ, ಎಂದು ನಿರ್ದೇಶ

ADVERTISEMENT

‘ಅನುಮೋದನೆಯಾಗಿದ್ದರೂ ಆರಂಭವಾಗದ ಕಾಮಗಾರಿಗಳ ಸ್ಥಳಕ್ಕೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಭೇಟಿ ನೀಡಿ ಪರಿಶೀಲಿಸಬೇಕು. ಕೆಲಸ ಆರಂಭವಾಗದಿರಲು ಕಾರಣ ತಿಳಿದು, ಸಮಸ್ಯೆ ಇತ್ಯರ್ಥಪಡಿಸಬೇಕು. ಜನರಿಂದ ದೂರು ಬಾರದಂತೆ ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕು’ ಎಂದು ಸೂಚಿಸಿದರು.

ಗ್ರಾಮ ವಿಕಾಸ ಯೋಜನೆ, ಮಲೆನಾಡು ಅಭಿವೃದ್ಧಿ ಯೋಜನೆ, ಬಯಲು ಸೀಮೆ ಅಭಿವೃದ್ಧಿ ಯೋಜನೆ ಸೇರಿ ವಿವಿಧ ಯೋಜನೆಗಳಡಿ ಕೈಗೊಂಡ ಕಾಮಗಾರಿಗಳ ಕುರಿತು ಮಾಹಿತಿ ಪಡೆದು, ಪ್ರಗತಿ ಸಾಧಿಸಲು ನಿರ್ದೇಶನ ನೀಡಿದರು.

ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ(ಅಭಿವೃದ್ಧಿ) ಬಸವರಾಜ ಅಡವಿಮಠ, ಕೆಆರ್‌ಐಡಿಎಲ್‌ ಅಧೀಕ್ಷಕ ಎಂಜಿನಿಯರ್‌ ಸಿದ್ಧಾರ್ಥ ಎಸ್., ಬೆಳಗಾವಿ ಕಾರ್ಯನಿರ್ವಾಹಕ ಎಂಜಿನಿಯರ್‌ ಎಸ್.ಬಿ.ಶೇಗುಣಸಿ, ಚಿಕ್ಕೋಡಿ ಕಾರ್ಯನಿರ್ವಾಹಕ ಎಂಜಿನಿಯರ್‌ ಆರ್.ಪಿ.ನಾರಾಯಣಕರ ಇದ್ದರು.