ADVERTISEMENT

ದ್ವಿತೀಯ ಪಿಯುಸಿ: ಬಡತನದಲ್ಲೂ ಅಪೂರ್ವ ಸಾಧನೆ

ಬಡ ಮತ್ತು ಗ್ರಾಮೀಣ ಪ್ರತಿಭೆ ಲಕ್ಷ್ಮಿ ಹರಿಜನ

ಬಾಲಶೇಖರ ಬಂದಿ
Published 17 ಏಪ್ರಿಲ್ 2024, 4:46 IST
Last Updated 17 ಏಪ್ರಿಲ್ 2024, 4:46 IST
ತಂದೆ ಗುರುನಾಥ, ತಾಯಿ ಯಲ್ಲವ್ವ ಜೊತೆಗೆ ಲಕ್ಷ್ಮಿ  
ತಂದೆ ಗುರುನಾಥ, ತಾಯಿ ಯಲ್ಲವ್ವ ಜೊತೆಗೆ ಲಕ್ಷ್ಮಿ     

ಮೂಡಲಗಿ: ತಾಲ್ಲೂಕಿನ ಅವರಾದಿ ಗ್ರಾಮದ ಕೂಲಿ ಮಾಡುವ ದಂಪತಿಯ ಮಗಳು ಲಕ್ಷ್ಮೀ ಗುರುನಾಥ ಹರಿಜನ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಶೇ 97ರಷ್ಟು ಅಂಕ ಪಡೆದು ತಾನು ಕಲಿಯುತ್ತಿರುವ ಮಹಾಲಿಂಗಪುರದ ಕೆಎಲ್‌ಇ ಸಂಸ್ಥೆಯ ಪದವಿ ಪೂರ್ವ ಮಹಾವಿದ್ಯಾಲಯಕ್ಕೆ ಮೊದಲ ಸ್ಥಾನ ಪಡೆದಿದ್ದಾರೆ.

ತಂದೆ ಗುರುನಾಥ ಮತ್ತು ತಾಯಿ ಯಲ್ಲವ್ವ ಇಬ್ಬರೂ ಬೇರೆಯವರ ಹೊಲದಲ್ಲಿ ಕೃಷಿ ಕೂಲಿ ಮಾಡಿಕೊಂಡು ಬದುಕು ಕಟ್ಡಿಕೊಂಡಿದ್ದಾರೆ. ಈ ದಂಪತಿಗೆ ಲಕ್ಷ್ಮಿ ಜತೆಗೆ ಇನ್ನಿಬ್ಬರು ಹೆಣ್ಣು ಮಕ್ಕಳು, ಒಬ್ಬ ಮಗ ಇದ್ದಾರೆ. ಮಕ್ಕಳ ಶಿಕ್ಷಣವೆಲ್ಲ ಕೂಲಿಯಿಂದ ಬರುವ ಹಣದಲ್ಲಿಯೇ ಸಾಗಬೇಕು. ಸ್ವಂತ ಭೂಮಿ ಇಲ್ಲ. ಆಶ್ರಯ ಯೋಜನೆಯಲ್ಲಿ ನಿರ್ಮಿಸಿಕೊಂಡಿರುವ ಮನೆ ಇದೆ. ಇಂಥ ಕಡು ಬಡ ಕುಟುಂಬದಲ್ಲಿರುವ ಲಕ್ಷ್ಮಿಗೆ ಸರಸ್ವತಿ ಒಲಿದಿದ್ದು, ಬಡ ಮತ್ತು ಗ್ರಾಮೀಣ ಪ್ರತಿಭೆ ಎನ್ನುವ ಹೆಗ್ಗಳಿಕೆ ಪಡೆದಿದ್ದಾಳೆ.

 ‘ಬಿ.ಕಾಂ ಪದವಿ ಮುಗಿಸಿ ಕೆಪಿಎಸ್‌ಸಿ, ಯುಪಿಎಸ್‌ಸಿಯ ಸ್ಪರ್ಧಾತ್ಮಕ ಪರೀಕ್ಷೆ ಪಾಸ್‌ ಮಾಡಬೇಕಂತ ಗುರಿ ಐತ್ರೀ’ ಎಂದು ಲಕ್ಷ್ಮಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ADVERTISEMENT

‘ಸಾಲಾ ಮಾಡಿ ಮಕ್ಕಳನ್ನು ಕಲಿಸಾಕ್ಕತ್ತೈನ್ರೀ. ಸಂಬಂಧಿಕರು ಸಹಾಯ ಮಾಡ್ಯಾರ್ರೀ. ಲಕ್ಷ್ಮಿ ಶಾನ್ಯಾ ಅದಾಳ್ರೀ ಕೂಲಿ ಮಾಡಿ ಅವಳನ್ನು ಕಲಿಸ್ತಿನ್ರೀ’ ಎಂದು ಲಕ್ಷ್ಮಿಯ ಪಾಲಕರು ತಿಳಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.