ಚಿಕ್ಕೋಡಿ: ‘ಅಚಲವಾದ ಗುರಿ ಇಟ್ಟುಕೊಂಡು ಸಾಗಿದರೆ ಬಡತನ, ಸಂಕಟ ಅರ್ಥಹೀನ ಕಾರಣಗಳಾಗುತ್ತವೆ. ಶಿಕ್ಷಣ ಮಾತ್ರ ನಮ್ಮನ್ನು ಸದೃಢರನ್ನಾಗಿ ಮಾಡುತ್ತದೆ’ ಎಂದು ರಾಜ್ಯ ಲೆಕ್ಕ ಪರಿಶೋಧಕ ಇಲಾಖೆ ಜಂಟಿ ನಿರ್ದೇಶಕ ಶಂಕರಾನಂದ ಬನಶಂಕರಿ ಹೇಳಿದರು.
ತಾಲ್ಲೂಕಿನ ಮಲಿಕವಾಡ ಗ್ರಾಮದಲ್ಲಿ ಮಂಗಳವಾರ ಮಲ್ಲಿಕಾರ್ಜುನ ಜೀರ್ಣೋದ್ಧಾರ ಸಮಿತಿ ವತಿಯಿಂದ ನಡೆದ ಸ್ಪರ್ಧಾತ್ಮಕ ಪರೀಕ್ಷಾ ಮಾರ್ಗದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಕುಂಟು ನೆಪದಲ್ಲಿ ಸ್ಪರ್ಧೆಯಿಂದ ದೂರ ನಿಲ್ಲದೇ ಯಶಸ್ವಿಯಾಗಬೇಕು’ ಎಂದು ಯುವಕರಿಗೆ ಕಿವಿಮಾತು ಹೇಳಿದರು.
ಕರ್ನಾಟಕ ಲೆಕ್ಕ ಪರಿಶೋಧನಾ ಇಲಾಖೆಯ ಪ್ರೊಬೇಷನರಿ ಉಪ ನಿರ್ದೇಶಕ ಶೇಖರ ಪೂಜಾರಿ ಮಾತನಾಡಿ, ‘ಸ್ಪರ್ಧಾತ್ಮಕ ಪರೀಕ್ಷೆ ದೊಡ್ಡ ವಿಷಯವಲ್ಲ. ನಿರಂತರ ಅಧ್ಯಯನ ಮಾಡಿದರೆ ಸುಲಭವಾಗಿ ಸಾಧಿಸಬಹುದು. ವಾಣಿಜ್ಯ ಇಲಾಖೆಯು ಪದವೀಧರರಿಗೆ ಅಡಿಟ್‌ನಲ್ಲಿ ಸಾಕಷ್ಟು ಅವಕಾಶಗಳು ಇವೆ’ ಎಂದು ಹೇಳಿದರು
ಗುರುದತ್ತ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಬಾಳಾಸಾಹೇಬ ಪಾಟೀಲ, ವಾಯುಪಡೆ ಯೋಧ ರಾಜೇಂದ್ರ ಸುತಾರ, ನಿವೃತ್ತ ಮುಖ್ಯಶಿಕ್ಷಕ ಸುಲೋಚನಾ ಕೋಳಿ ಮುಂತಾದವರು ಮಾತನಾಡಿದರು.
ಮೇಲೆ ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಅಣ್ಣಾಸಾಹೇಬ ಇಂಗಳೆ, ಮಲಿಕವಾಡ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನಿತಾ ಇಂಗಳೆ, ಉಪಾಧ್ಯಕ್ಷ ಸಂಭಾಜಿ ಪಾಟೀಲ, ದೇವಸ್ಥಾನ ಸಮಿತಿಯ ವಿಶ್ವನಾಥ ಪಾಟೀಲ, ಶಿವಾನಂದ ಹಿರೇಮಠ, ರಾಜೇಂದ್ರ ಪಾಟೀಲ, ದಿಲೀಪ ಕಾಂಬಳೆ, ಎಂ.ಜಿ. ಸಂಕಪಾಳ, ಸುಭಾಷ ಸಂಕಪಾಳ, ಶಮಾ ಜಮಾದಾರ, ಅನಿತಾ ಅಕ್ಕೋಳೆ, ಲಕ್ಷ್ಮಿ ನಡುವಿನಮನಿ ಮುಂತಾದವರು ವೇದಿಕೆ ಮೇಲಿದ್ದರು.
ಸುಧೀರ ಪಾಟೀಲ ಸ್ವಾಗತಿಸಿದರು. ಚಂದ್ರಕಾಂತ ಶಿರೋಳೆ ನಿರೂಪಿಸಿದರು. ಮಹಾಂತೇಶ ಪಾಟೀಲ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.