ADVERTISEMENT

₹ 10 ಲಕ್ಷ ಮೌಲ್ಯದ ಮದ್ಯ ವಶ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2018, 17:01 IST
Last Updated 7 ಡಿಸೆಂಬರ್ 2018, 17:01 IST
ಅಕ್ರಮವಾಗಿ ಶುಕ್ರವಾರ ಸಾಗಿಸುತ್ತಿದ್ದ ಮದ್ಯವನ್ನು ಅಬಕಾರಿ ಪೊಲೀಸರು ವಶಪಡಿಸಿಕೊಂಡು, ನಾಲ್ವರು ಆರೋಪಿಗಳನ್ನು ಬಂಧಿಸಿದರು
ಅಕ್ರಮವಾಗಿ ಶುಕ್ರವಾರ ಸಾಗಿಸುತ್ತಿದ್ದ ಮದ್ಯವನ್ನು ಅಬಕಾರಿ ಪೊಲೀಸರು ವಶಪಡಿಸಿಕೊಂಡು, ನಾಲ್ವರು ಆರೋಪಿಗಳನ್ನು ಬಂಧಿಸಿದರು   

ಬೆಳಗಾವಿ: ಗೋವಾದಿಂದ ಮಹಾರಾಷ್ಟ್ರ ಕಡೆಗೆ ಅಕ್ರಮವಾಗಿ ಸಾಗಿಸುತ್ತಿದ್ದ ₹ 10 ಲಕ್ಷ ಮೌಲ್ಯದ ಮದ್ಯ (350 ಬಾಕ್ಸ್‌ ಗೋವಾ ಮದ್ಯ), ₹ 15 ಲಕ್ಷ ಮೌಲ್ಯದ ಕಾರು ಮತ್ತು ಲಾರಿಯನ್ನು ಅಬಕಾರಿ ಪೊಲೀಸರು ಶುಕ್ರವಾರ ವಿಟಿಯು ಸಮೀಪದಲ್ಲಿ ತಡೆದು ವಶಪಡಿಸಿಕೊಂಡಿದ್ದಾರೆ. ನಾಲ್ವರನ್ನು ಬಂಧಿಸಲಾಗಿದೆ.

ಮಹಾರಾಷ್ಟ್ರದ ಸಿಂಧುದುರ್ಗದವರಾದ ಪ್ರದೀಪ ಪಾಟೀಲ, ಮಿತಿಲೇಶ್ ಸುಕಿ ಹಾಗೂ ಶುಭಂ ಸಿತೋಳೆ ಹಾಗೂ ಬೆಳಗಾವಿಯ ಯಲ್ಲಪ್ಪ ಪಾಟೀಲ ಬಂಧಿತ ಆರೋಪಿಗಳು. ಇಬ್ಬರು ಕಾರಿನಲ್ಲಿ ಹಾಗೂ ಇಬ್ಬರು ಲಾರಿಯಲ್ಲಿ ಮದ್ಯವನ್ನು ಅಕ್ರಮವಾಗಿ ಸಾಗಿಸುತ್ತಿದ್ದರು ಎಂದು ಅಬಕಾರಿ ಪೊಲೀಸರು ಮಾಹಿತಿ ನೀಡಿದ್ದಾರೆ.

‌ಜಂಟಿ ಆಯುಕ್ತ ವೈ. ಮಂಜುನಾಥ, ಉಪ ಆಯುಕ್ತ ಅರುಣ್‌ಕುಮಾರ್‌ ನೇತೃತ್ವದಲ್ಲಿ ಉಪ ಅಧೀಕ್ಷಕ ವಿಜಯಕುಮಾರ್ ಹಿರೇಮಠ, ಇನ್‌ಸ್ಪೆಕ್ಟರ್‌ಗಳಾದ ಲಿಂಗರಾಜ, ರವೀಂದ್ರ ಹೊಸಳ್ಳಿ ಹಾಗೂ ವಿಶ್ವನಾಥ ಗಾಣಿಗೇರ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.