ADVERTISEMENT

ಮೂಡಲಗಿ ಲೋಕ್‌ ಅದಾಲತ್‌: 1,954 ಪ್ರಕರಣ ಇತ್ಯರ್ಥ 

ಮೂಡಲಗಿ ಲೋಕ್‌ ಅದಾಲತ್‌

​ಪ್ರಜಾವಾಣಿ ವಾರ್ತೆ
Published 14 ಜುಲೈ 2024, 16:24 IST
Last Updated 14 ಜುಲೈ 2024, 16:24 IST
ಮೂಡಲಗಿಯ  ದಿವಾಣಿ  ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ಆವರಣದಲ್ಲಿ ಜರುಗಿದ ಲೋಕ್ ಅದಾಲತ್‌ದಲ್ಲಿ ನ್ಯಾಯಾಧೀಶೆ  ಜ್ಯೋತಿ ಪಾಟೀಲ ಮಾತನಾಡಿದರು
ಮೂಡಲಗಿಯ  ದಿವಾಣಿ  ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ಆವರಣದಲ್ಲಿ ಜರುಗಿದ ಲೋಕ್ ಅದಾಲತ್‌ದಲ್ಲಿ ನ್ಯಾಯಾಧೀಶೆ  ಜ್ಯೋತಿ ಪಾಟೀಲ ಮಾತನಾಡಿದರು    

ಮೂಡಲಗಿ: ‘ನ್ಯಾಯಾಲಯದಲ್ಲಿನ ಪ್ರಕರಣಗಳನ್ನು ಸೌಹಾರ್ದಯುತ ರೀತಿ ಇತ್ಯರ್ಥಪಡಿಸುವ ಲೋಕ್ ಅದಾಲತ್ ಕಾರ್ಯಕ್ರಮ ಕಕ್ಷಿದಾರರಿಗೆ ಬಹಳ ಅನುಕೂಲವಾಗುವುದು’ ಎಂದು ಪಟ್ಟಣದ ದಿವಾಣಿ ಹಾಗೂ ಜೆಎಂಎಫ್‌ಸಿ ನ್ಯಾಯಾಧೀಶೆ ಜ್ಯೋತಿ ಪಾಟೀಲ ಹೇಳಿದರು.

ಪಟ್ಟಣದ ದಿವಾಣಿ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ಆವರಣದಲ್ಲಿ ಶನಿವಾರ ಜರುಗಿದ ಲೋಕ್ ಅದಾಲತನಲ್ಲಿ ಮಾತನಾಡಿ, ‘ನ್ಯಾಯಾಂಗ ವ್ಯವಸ್ಥೆಯಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ನಡೆಯುವ ಲೋಕ್ ಅದಾಲತ್‌ನಲ್ಲಿ ಪ್ರಕರಣಗಳನ್ನು ಇತ್ಯರ್ಥ ಪಡಿಸುವುದರಿಂದ ಸಮಯ ಹಾಗೂ ಹಣವನ್ನು ಉಳಿಸಿ ಕೊಳ್ಳಬಹುದಾಗಿದೆ’ ಎಂದರು.

43 ಸಿವಿಲ್ ಪ್ರಕರಣಗಳು, 1620 ಅಪರಾಧ ಪ್ರಕರಣ, 23 ಬ್ಯಾಂಕ್ ಪ್ರಕರಣ, ಒಬ್ಬ ಮಹಿಳೆಗೆ ಉಪಜೀವನಾಂಶ, ಎರಡು ಜೋಡಿ ಪತಿ–ಪತ್ನಿ ಹೊಂದಾಣಿಕೆ ಹಾಗೂ 265 ಜನನ-ಮರಣ ಒಟ್ಟು 1954 ಪ್ರಕರಣಗಳನ್ನು ನ್ಯಾಯಾಧೀಶೆ ಜ್ಯೋತಿ ಪಾಟೀಲ ಅವರು ಇತ್ಯರ್ಥಗೊಳಿಸಿದರು.

ADVERTISEMENT

ಎಪಿಪಿ ಶುಭ, ಮೂಡಲಗಿ ವಕೀಲರ ಸಂಘದ ಅಧ್ಯಕ್ಷ ಆರ್.ಆರ್.ಬಾಗೋಜಿ, ಪ್ರಧಾನ ಕಾರ್ಯದರ್ಶಿ ಅನೀಲ ಕೌಜಲಗಿ ಮತ್ತು ಪದಾಧಿಕಾರಿಗಳು, ವಕೀಲರು ಹಾಗೂ ನ್ಯಾಯಾಲಯ ಸಿಬ್ಬಂದಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.