
ಪ್ರಜಾವಾಣಿ ವಾರ್ತೆ
ನಿಪ್ಪಾಣಿ: ಪುಣೆ– ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಸ್ತವನಿಧಿ ಘಾಟ್‌ನ ತಿರುವಿನಲ್ಲಿಲಾರಿ ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿ ಬಾಲಕ ಮೃತಪಟ್ಟು, ಮೂವರು ಗಾಯಗೊಂಡ ಘಟನೆ ಭಾನುವಾರ ನಡೆದಿದೆ.
ಇಲ್ಲಿನ ರಾಮನಗರದ ಸಿದ್ಧಾರ್ಥ ತಾವದಾರೆ (12) ಮೃತ. ಬಾಲಕನ ತಂದೆ ಮಹೇಶ ಅಲಿಯಾಸ್ ಬಾಲಕೃಷ್ಣ ಮಾಳಪ್ಪ ತಾವದಾರೆ (42), ತಾಲ್ಲೂಕಿನ ಕುರ್ಲಿ ಗ್ರಾಮದ ನಾರಾಯಣ ಮಾರುತಿ ಯಾದವ (48), ಶ್ರೀಪೆವಾಡಿ ಗ್ರಾಮದ ಸೌರಭ ಸಾತಪ್ಪ ಬಾಗೆ (23) ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಿಪ್ಪಾಣಿಯಿಂದ ಮಹಾರಾಷ್ಟ್ರದ ಆಜರಾ ಪಟ್ಟಣಕ್ಕೆ ಕಾರಿನಲ್ಲಿ ಹೋಗುತ್ತಿದ್ದಾಗ, ಮುಂದಿನ ವಾಹನ ಹಿಂದಿಕ್ಕುವಾಗ ಹಿಂದಿನಿಂದ ಬಂದು ಲಾರಿ ಡಿಕ್ಕಿ ಹೊಡೆದು ಅವಘಡ ಸಂಭವಿಸಿದೆ.