ADVERTISEMENT

ಮಾಲಗಾರ ನಿಗಮ ಸ್ಥಾಪಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2024, 16:03 IST
Last Updated 27 ಮಾರ್ಚ್ 2024, 16:03 IST
ಮುಗಳಖೋಡದಲ್ಲಿ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಸಿ.ಬಿ. ಕುಲಿಗೋಡ ಮಾತನಾಡಿದರು
ಮುಗಳಖೋಡದಲ್ಲಿ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಸಿ.ಬಿ. ಕುಲಿಗೋಡ ಮಾತನಾಡಿದರು   

ಮುಗಳಖೋಡ: ‘ಮಾಳಿ, ಮಾಲಗಾರ ಸಮುದಾಯದ ಪ್ರಮುಖ ಬೇಡಿಕೆಯಾದ ಮಾಳಿ ಮಾಲಗಾರ ನಿಗಮ ಮಂಡಳಿ ಸ್ಥಾಪನೆ ಕನಸಾಗಿ ಉಳಿದಿದೆ. ಮುಂದಿನ ದಿನಗಳಲ್ಲಿ ಅದು ನನಸು ಮಾಡಬೇಕು’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿ.ಬಿ. ಕುಲಿಗೋಡ ಹೇಳಿದರು.

ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ಪಟ್ಟಣದಲ್ಲಿ ಬುಧವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ‘ಚಿಕ್ಕೋಡಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಅವರ ಗೆಲುವಿಗೆ ಕಾಂಗ್ರೆಸ್ ಪಕ್ಷದ ಎಲ್ಲ ಕಾರ್ಯಕರ್ತರು ಶ್ರಮಪಟ್ಟು ಕಾರ್ಯನಿರತರಾಗಬೇಕಿದೆ’ ಎಂದು ಹೆಳಿದರು.

ಸತೀಶ ಜಾರಕಿಹೊಳಿ ಮಾತನಾಡಿ, ‘ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ. ಜನಪರ ಯೋಜನೆಗಳನ್ನು ಜಾರಿಗೊಳಿಸಿದೆ. ಈ ಭಾಗದ ಜನರಿಗೆ ಏಪ್ರಿಲ್ ತಿಂಗಳಲ್ಲಿ ಹಿಡಕಲ್ ಜಲಾಶಯದಿಂದ ಎರಡು ಬಾರಿಯಾದರೂ ನೀರು ಬಿಡಲು ವ್ಯವಸ್ಥೆ ಮಾಡಲಾಗುತ್ತದೆ’ ಎಂದು ಹೇಳಿದರು.

ADVERTISEMENT

ಶಾಸಕ ಮಹೇಂದ್ರ ತಮ್ಮನವರ, ಮಾಜಿ ಶಾಸಕ ಎಸ್.ಬಿ. ಘಾಟಗೆ, ಪ್ರದೀಪ ಹಾಲ್ಗುಣಿ, ಡಿ.ಎಸ್. ನಾಯಕ, ಪಿ.ಬಿ. ಖೇತಗೌಡರ, ಪ್ರಕಾಶ ಆದಪ್ಪಗೋಳ, ಗಣಪತಿ ಕುಲಿಗೋಡ, ಮಹಾಂತೇಶ ಕುಲಿಗೋಡ, ರಾಜಕುಮಾರ ನಾಯಿಕ, ಹಣಸಾಬ ನಾಯಿಕ, ದಿಲಾವರ್ ಎಲಿಗಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.